ಹಾಸನ: ಹಾಸನದಲ್ಲಿ ಇಂದು ನಡೆಯಲಿರುವ ಜನಕಲ್ಯಾಣ ಸಮಾವೇಶಕ್ಕೆ ಜನರನ್ನು ಕರೆತರಲು ನೂರಾರು ಸಾರಿಗೆ ಬಸ್‌ಗಳು ಹಾಸನ ನಗರದ ರೈಲ್ವೆ ನಿಲ್ದಾಣದ ಬಳಿದಿಂದ ಹೊರಟಿವೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹಳ್ಳಿ ಹಳ್ಳಿಗಳಿಂದ ಕೈ ಕಾರ್ಯಕರ್ತರು ಬಸ್‌ಗಳ ಮೂಲಕ ಸಿದ್ದರಾಮಯ್ಯ ಅಭಿಮಾನಿಗಳನ್ನು ಸಮಾವೇಶಕ್ಕೆ ಕರೆತರುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡುವುದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಯೋಜಿಸಿದ್ದು, ಸಮಾವೇಶದ ಸ್ಥಳ, ಎಸ್.ಎಂ.ಕೃಷ್ಣ ನಗರದಲ್ಲಿ ಉತ್ಸಾಹ ಭರಿತ ವಾತಾವರಣ ಸೃಷ್ಟಿಯಾಗಿದೆ.