ಮಳೆ ಅಬ್ಬರ: ಹಾಸನ ನಗರ ತತ್ತರ, ಹಾಸನಾಂಬೆ ಭಕ್ತರ ಪರದಾಟ, ಮುರಿದು ಬಿದ್ದ ಸ್ವಾಗತ ಕಮಾನು!

ಮಳೆಯಲ್ಲಿ ದರ್ಶನ ಪಡೆಯಲು ಭಕ್ತರು ಹರಸಾಹಸ

ಹಾಸನ: ಮುಂಗಾರು ವಿಫಲಗೊಂಡು ಹಿಂಗಾರು ಕೈಕೊಟ್ಟಿತು ಎನ್ನುವಾಗಲೇ ಎರಡು ದಿನಗಳಿಂದ ಹಾಸನದಲ್ಲಿ ಉತ್ತಮ ಮ:ಳೆಯಾಗುತ್ತಿದೆ.  ಅಬ್ಬರಿಸುತ್ತಿರೋ ಮಳೆಗೆ ಹಾಸನ ಸುತ್ತಮುತ್ತಲಿನ ಕೆರೆಗಳಿಗೆ ಸ್ವಲ್ಪ ನೀರು ಬಂದಿದ್ದು, ಬಿಸಿಲಿನಿಂದ ಒಣಗುತ್ತಿದ್ದ ರಾಗಿ ಬೆಳೆಗೆ ಜೀವಕಳೆ ಬಂದಿದೆ.

ಬುಧವಾರ ಮಧ್ಯಾಹ್ನ ಅರ್ಧ ಗಂಟೆ ಕಾಲ ಮಳೆ ಸುರಿಯಿತು. ಗಾಳಿ ಸಹಿತ ಸುರಿದ ಭರ್ಜರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.

ಹಾಸನಾಂಬೆ ದೇವಿ ದರ್ಶನಕ್ಕೂ ಮಳೆ ಅಡ್ಡಿ: ಮಳೆ ನಿರೀಕ್ಷೆ ಇಲ್ಲದೆ ಹಾಸನಾಂಬೆ ದರ್ಶನ ಪಡೆಯಲು ಬಂದಿದ್ದ ಭಕ್ತರು ದಿಢೀರನೇ ಬಂದ ಮಳೆಗೆ  ಪರದಾಡಿದರು.  ಹಾಸನಾಂಬೆ ದೇಗುಲದ ಹೊರಬಾಗದಲ್ಲಿ ಬಿಸಿಲಿಗೆ ಜರ್ಮನ್ ಟೆಂಟ್‍ ಹಾಕಿದ್ದು, ದೇವಸ್ಥಾನದ ಒಳಗೆ ಯಾವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಹವಾಮಾನ ಇಲಾಖೆಯು ಒಂದಯ ವಾರದಿಂದಲೂ ಮಳೆಯ ಮುನ್ಸೂಚನೆ ನೀಡಿದ್ದರೂ ದೇಗುಲದ ಆವರಣದಲ್ಲಿ ಮಳೆಯಿಂದ ರಕ್ಷಣೆಗೆ ಯಾವ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಹೀಗಾಗಿ  ಸರದಿಯಲ್ಲಿ ನಿಂತಿದ್ದ ಭಕ್ತರು ದಿಢೀರನೇ ಸುರಿದ ಮಳೆಗೆ ಪರದಾಡಿದರು.

ಅಬ್ಬರಿಸಿ ಸುರಿದ ಮಳೆಗೆ ದೇವಾಲಯದ ಆವರಣ ಜಲಾವೃತವಾಯಿತು. ರಾಜಗೋಪುರದ ಮುಂಭಾಗದಲ್ಲಿ  ನೀರು ನಿಂತಿತು. ಮಳೆಯಲ್ಲಿ ದರ್ಶನ ಪಡೆಯಲು ಭಕ್ತರು ಹರಸಾಹಸ ಮಾಡಬೇಕಾಯಿತು.  ಸರದಿಯಲ್ಲಿ ನಿಂತಿದ್ದ ಸಾವಿರಾರು ಭಕ್ತರು ಮಳೆಯಿಂದ ರಕ್ಷಣೆಗಾಗಿ ಪರದಾಡಿಲ್ಲದೆ ದೇವಾಲಯದ ಒಳಗೆ ಓಡಿದರು.  ಮಹಿಳೆಯರು,  ಮಕ್ಕಳು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಬೇಕಾಯಿತು. ಕೆಲವರು ತಂದಿದ್ದ ಛತ್ರಿಯಲ್ಇ ರಕ್ಷಣೆ ಪಡೆದರೆ ಮಹಿಳೆಯರು ತಮ್ಮ ಸೀರೆಯ ಸೆರಗಿಲ್ಲೇ ಮಳೆಯ ರಕ್ಷಣೆ ಪಡೆದರು.

ಸಿಬ್ಬಂದಿಗೂ ಮಳೆಯ ಸ್ನಾನ: ಮಳೆಯಿಂದ ಭಕ್ತರು ರಕ್ಷಣೆ ಪಡೆಯಲು ಪರದಾಡಿದರೆ ಭದ್ರತೆ ಮತ್ತಿತರ ಕೆಲಸಗಳಿಗೆ ಹಾಸನಾಂಬೆ ಜಾತ್ರೆ ಕರ್ತವ್ಯಕ್ಎ ನಿಯೋಜನೆಗೊಂಡಿದ್ದ ಭಕ್ತರು ಮಳೆಯ ಸ್ನಾನ ಮಾಡಬೇಕಾಯಿತು.