ಹಾಸನದಲ್ಲಿ ರೌಡಿಸಂ ಅಟ್ಟಹಾಸ; ಹಾಲಿನ ಬೂತ್ ಮಾಲೀಕನ ಕೊಲೆ

ಹಾಸನ: ಇಂದು ಬೆಳಗ್ಗೆ ನಗರ ಹೊರವಲಯದ ಕೌಶಿಕಗೇಟ್ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಾಯಗೊಳಿಸಿದ್ದ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ನಂದಿನಿ ಹಾಲಿನ ಬೂತ್ ನಡೆಸುತ್ತಿದ್ದ ಸತೀಶ್ ಮೃತ ಯುವಕ. ಇಂದು ಬೆಳಗ್ಗೆ ಆತನ ಮೇಲೆ ದಾಳಿ ನಡೆದಿತ್ತು. ಗಾಯಗೊಂಡಿದ್ದ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಂಜೆ ಮೃತಪಟ್ಟಿದ್ದಾನೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಯುವಕನ ಕುಟುಂಬದವರ ಆಕ್ರಂದನ ಮುಗಿಸಲು‌ ಮುಟ್ಟಿದೆ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.