ಮೂರೇ ದಿನಕ್ಕೆ ಹಾಸನಾಂಬ ದೇವಾಲಯಕ್ಕೆ ಹರಿದು ಬಂದ ಕೋಟಿ ಕೋಟಿ ರೂ. ಆದಾಯ!

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇವಿ ದರ್ಶನ ಆರಂಭವಾದ ಮೂರೇ ದಿನಗಳಲ್ಲಿ ದೇವಾಲಯದ ಆದಾಯ ಎರಡು ಕೋಟಿ ರೂ. ದಾಟಿದೆ!

ವಿಶೇಷ ದರ್ಶನದ ಟಿಕೆಟ್‌ ಹಾಗೂ ಲಾಡು ಮಾರಾಟದಿಂದ ದೇವಾಲಯಕ್ಕೆ ಕೋಟಿ ಕೋಟಿ ಆದಾಯ ಹರಿದು ಬರುತ್ತಿದೆ.

ಭಾನುವಾರ ರಾತ್ರಿ ಏಳು ಗಂಟೆಯವರೆಗೂ 22217 ಭಕ್ತರು 300 ರೂ. ವಿಶೇಷ ದರ್ಶನದ ಟಿಕೆಟ್‌ಗಳನ್ನು ಪಡೆದು ದೇವಿ ದರ್ಶನ ಮಾಡಿದ್ದು ಅವರಿಂದ 66,35,100 ರೂ. ಸಂಗ್ರಹವಾಗಿದೆ.

15713 ಜನರು 1000 ರೂ. ವಿಶೇಷ ದರ್ಶನದ ಟಿಕೆಟ್‌ಗಳನ್ನು ಪಡೆದು ದರ್ಶನ ಪಡೆದಿದ್ದು, ಅದರಿಂದ 1,57,13,000 ರೂ. ಸಂಗ್ರಹವಾಗಿದೆ.

30,750 ಲಾಡು ಪ್ರಸಾದ ಮಾರಾಟವಾಗಿದ್ದು, 18,45,000 ರೂ. ಸಂಗ್ರಹವಾಗಿದೆ. ಇದೆಲ್ಲ ಸೇರಿ ಭಾನುವಾರ ರಾತ್ರಿ ಏಳು ಗಂಟೆಯವರೆಗೂ 2,41,93,100 ರೂ. ಆದಾಯ ಸಂಗ್ರಹವಾಗಿದೆ.