ಹಾಸನ:ನ್ಯಾಯ ಒದಗಿಸುವಂತೆ ಕೋರಿ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ನೀಡಿದ ಕಾರ್ತಿಕ್‌ಗೆ ನ್ಯಾಯ ಕೊಡಿಸಲು ಆಗದಿದ್ದ ಮೇಲೆ ಜಿ.ದೇವರಾಜೇಗೌಡ ಪೆನ್‌ಡ್ರೈವ್ ತಮ್ಮ ಬಳಿಯೇ ಇರಿಸಿಕೊಂಡಿದ್ದೇಕೆ? ಎಂದು ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದರು.
ಪೆನ್‌ಡ್ರೈವ್ ಹೊರಕ್ಕೆ ಬಿಟ್ಟವರು ಕಾರ್ತಿಕ್ ಹಾಗೂ ದೇವರಾಜೇಗೌಡ. ದೇವರಾಜೇಗೌಡ ಅವರಿಗೆ ಮಾತ್ರ ನಾನು ಪೆನ್‌ಡ್ರೈವ್ ಕೊಟ್ಟೆ ಅಂತ ಕಾರ್ತಿಕ್ ಹೇಳಿದ್ದಾರೆ. ದೇವೇಗೌಡರ ಕುಟುಂಬ ದೇವರಾಜೇಗೌಡ ನಡುವೆ ಜಿದ್ದಾಜಿದ್ದಿ ನಡೆಯುತ್ತಿತ್ತು.
ಆಗ ಪೆನ್ ಡ್ರೈವ್ ತನಗೆ ತಲುಪಿದಾಗ ಪ್ರಕರಣ ಸುಖಾಂತ್ಯ ಮಾಡಲು ದೇವರಾಜೇಗೌಡ ಯಾಕೆ ಮನಸ್ಸು ಮಾಡಲಿಲ್ಲ? ಆರು ತಿಂಗಳು ಏಕೆ ಪೆನ್‌ಡ್ರೈವ್ ತಮ್ಮ ಬಳಿ ಇಟ್ಟುಕೊಂಡರು? ಎಂದು ಪ್ರಶ್ನಿಸಿದರು.
ಅವರೊಬ್ಬ ವಕೀಲರಾಗಿ, ಜಡ್ಜ್ ಅಥವಾ ಪೊಲೀಸರಿಗೆ ಪೆನ್‌ಡ್ರೈವ್ ಕೊಟ್ಟಿದ್ದರೆ ಮಹಿಳೆಯರ ಮಾನಹರಣ ಆಗುತ್ತಿರಲಿಲ್ಲ. ಅವರು ಹಾಗೆ ಮಾಡಿದಿದ್ದರೆ ಎಲ್ಲ ವಕೀಲರಿಗೂ ಗೌರವ ಬರುತ್ತಿತ್ತು, ಅವರ ಘನತೆ ಹೆಚ್ಚುತ್ತಿತ್ತು ಎಂದರು.
ಯಾರು ಪೆನ್‌ಡ್ರೈವ್ ಹಂಚಿದ್ದಾರೆ ಎನ್ನವುದು ಬೆಳಕಿಗೆ ಬರಲೇಬೇಕು. ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ಅನರ್ಹ ಮಾಡಲು ಇದು ಕಾರಣ ಆಗದು.
ಈ ಕೃತ್ಯ ಎಸಗಿದಷ್ಟೇ ತಪ್ಪು ಮಹಿಳೆಯರ ಮಾನ, ಮರ್ಯಾದೆ, ಘನತೆ ಗೌರವ ಹಾಳು ಮಾಡಿದ್ದಾಗಿದೆ.
ದೇವರಾಜೇಗೌಡ ಇದರಲ್ಲಿ ಸಿಕ್ಕಿಕೊಳ್ತಾರೆ. ಅವರು ಪೆನ್‌ಡ್ರೈವ್‌ನ್ನು ಉನ್ನತ ಅಧಿಕಾರಿಗೆ ಕೊಡಬೇಕಿತ್ತು.
ಇದರಲ್ಲಿ ದೇವರಾಜೇಗೌಡ ಒಬ್ಬ ಅಪರಾಧಿ. ಡಿ.ಕೆ.ಶಿವಕುಮಾರ್ ಶ್ರೇಯಸ್ಸು, ಅವರ ಯಶಸ್ಸು ತಡೆಯಲಾರದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.