ಹಾಸನ : ಶಾಲೆಯಲ್ಲಿ ವಿಶೇಷ ತರಗತಿ ನಡೆಯುತ್ತಿದ್ದ ವೇಳೆ ಜೇನುಹುಳುಗಳು ದಾಳಿ ಮಾಡಿದ್ದು, ಜೇನುನೊಣ ಕಡಿತದಿಂದ ಅಸ್ವಸ್ಥಗೊಂಡ ಐವರು ಮಕ್ಕಳು ಆಸ್ಪತ್ರೆ ಸೇರಿದ್ದಾರೆ.
ಬೇಲೂರು ತಾಲೂಕು ತಗರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ ವಿಶೇಷ ತರಗತಿ ನಡೆಯುತ್ತಿದ್ದಾಗ ಕೊಠಡಿಯೊಳಗೆ ನುಗ್ಗಿದ ಜೇನುನೊಣಗಳ ಹಿಂಡು ಮಕ್ಕಳ ಮೇಲೆ ದಾಳಿ ನಡೆಸಿದವು.
ಶಿಕ್ಷಕರು ತಕ್ಷಣವೇ ಮಕ್ಕಳನ್ನು ಕೊಠಡಿಯಿಂದ ಹೊರತಂದು ರಕ್ಷಿಸಿದರು. ನಂತರ ಬೇಲೂರು ತಾಲೂಕು ಆಸ್ಪತ್ರೆಗೆ ಕರೆತಂದು ದಾಖಲಿಸಿದರು.
ತಹಸೀಲ್ದಾರ್ ಮಮತಾ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.