93 ವರ್ಷಗಳ ಜಾನಮ್ಮ-ಫಾತಿಮಾ ಹೃದಯಸ್ಪರ್ಶಿ ಮರುಭೇಟಿ ಹೀಗಿತ್ತು ನೋಡಿ!!

ಹಾಸನ: ಅದೊಂದು ಅಪರೂಪದ ಪ್ರಸಂಗ ಬಾಲ್ಯದ ಗೆಳತಿಯರಾದ ಇಬ್ಬರಿಗೂ ಈಗ ತೊಂಬತ್ತು ವರ್ಷ ದಾಟಿದೆ. ಮದುವೆಗಳಾದ ನಂತರ ಸಂಪರ್ಕ ತಪ್ಪಿತ್ತು. ಇಬ್ಬರೂ ಹತ್ತಾರು ವರ್ಷಗಳಿಂದ ಒಬ್ಬರನ್ನೊಬ್ಬರು ನೋಡಿರಲೂ ಇಲ್ಲ. ಇಬ್ಬರು ಅದೆಷ್ಟೋ ವರ್ಷಗಳ ನಂತರ ಮತಗಟ್ಟೆಯಲ್ಲಿ ಎದುರುಬದಿರಾದರು. ನಂತರ ಅವರಿಬ್ಬರೂ ವಯಸ್ಸು ಮರೆತರು ಬಾಲ್ಯದ ಗೆಳತಿಯರು ಪರಸ್ಪರ ಅಪ್ಪಿಕೊಂಡರು.

ಇಂತಹ ಹೃದಯಸ್ಪರ್ಶಿ ಪ್ರಸಂಗಕ್ಕೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಲಗಳಲೆ ಗ್ರಾಮದ ಮತಗಟ್ಟೆ ಸಾಕ್ಷಿಯಾಯಿತು.

ಜಾನಮ್ಮ (94), ಫಾತಿಮಾ (93) ಹತ್ತಾರು ವರ್ಷಗಳ ನಂತರ ಭೇಟಿಯಾದ ಗೆಳತಿಯರು.

ಮತದಾನ ಮಾಡಲು ಬಂದ ವೇಳೆ ಮುಖಾಮುಖಿಯಾದ ಬಾಲ್ಯದ ಗೆಳತಿಯರು ಕೂಡಲೇ ಸಂತಸದಿಂದ ತಬ್ಬಿಕೊಂಡರು. ಉಭಯ‌ ಕುಶಲೋಪರಿ ವಿಚಾರಿಸಿ ಖುಷಿಪಟ್ಟರು.