ಸಕಲೇಶಪುರ: ಪರಿಶಿಷ್ಟರು ಹಾಗೂ ಒಕ್ಕಲಿಗ ಸಮುದಾಯವನ್ನು ನಿಂದಿಸಿರುವ ಶಾಸಕ ಮುನಿರತ್ನ ಬಗ್ಗೆ ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿರುವ ದಲಿತರ ಪ್ರತಿಕ್ರಿಯೆ ಏನು? ಎಂದು ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀಸಲಾತಿ ಕುರಿತು ನೀಡಿದ ಹೇಳಿಕೆಯನ್ನು ತಿರುಚಿ ಟೀಕಿಸಿದ್ದ ಛಲವಾದಿ ನಾರಾಯಣ ಸ್ವಾಮಿ ಬಿಜೆಪಿ ರಾಜ್ಯ ಎಸ್ಸಿ-,ಎಸ್ಟಿ ಘಟಕದ ಅಧ್ಯಕ್ಷ ಹಾಗೂ ಶಾಸಕ ಸಿಮೆಂಟ್ ಮಂಜು ಶಾಸಕ ಮುನಿರತ್ನ ವಿಷಯದಲ್ಲಿ ಮೌನಕ್ಕೆ ಜಾರಿರುವುದು ನಿಂದಕರ ಪರವಾದ ಮನಸ್ಥಿತಿ ಎಂದು ಹೇಳಿಕೆಯಲ್ಲಿ ಆಪಾದಿಸಿದ್ದಾರೆ.
ಶಾಸಕ ಮುನಿರತ್ನ ಎಂತಹ ಜನಾಂಗೀಯ ದ್ವೇಷಿ ಎಂಬವುದು ಆತನ ಅಶ್ಲೀಲ ಆಡಿಯೋ ಸಾಕ್ಷಿಕರಿಸಿದೆ. ದಲಿತರನ್ನು ಹಾಗೂ ಒಕ್ಕಲಿಗರನ್ನು ಆತ ಹೀನವಾಗಿ ನಿಂದಿಸಿ ಮಾತನಾಡುತ್ತಾರೆ. ಅವರ ಮಾತು ನಾಗರಿಕ ಸಮಾಜ ಕೇಳಲು ಮುಜುಗರ ಪಡುತ್ತದೆ. ಇದನ್ನು ಕೇಳಿ ಬಿಜೆಪಿಯ ನಾಯಕರು ನೇರವಾಗಿ ಮುನಿರತ್ನ ಪರವಾದ ಹೇಳಿಕೆ ನೀಡುತ್ತಿದ್ದಾರೆ. ಇವರು ಬಿಜೆಪಿಯ ದಲಿತ ವಿರೋಧಿ ಕಾರ್ಯಸೂಚಿ ಬಹಿರಂಗವಾಗಿ ಅನುಷ್ಠಾನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಜಾತಿ, ಧರ್ಮ, ಸಮುದಾಯಗಳ ಬಗ್ಗೆ ಅಶ್ಲೀಲವಾಗಿ ದ್ಷೇಷದಿಂದ ಮಾತನಾಡುವುದನ್ನು ನಾನು ವಿರೋಧಿಸುತ್ತೇನೆ ಹಾಗೂ ಖಂಡಿಸುತ್ತೇನೆ ಎಂದು ಮುರಳಿ ಮೋಹನ್ ಹೇಳಿದ್ದಾರೆ.