ಹಾಸನ: ಇಲ್ಲಿ ಎಲ್ಲರೂ ಮುಖ್ಯರು, ಯಾರೂ ಅಮುಖ್ಯರಲ್ಲ ಎಂಬ ಮಾತಿನಂತೆ ನಾವೆಲ್ಲ ಒಂದು ಕುಟುಂಬದ ರೀತಿಯಲ್ಲಿ ತೊಡಗಿಸಿಕೊಂಡು ಹಾಸನಾಂಬ ಉತ್ಸವ ಯಶಸ್ವಿಗೊಳಿಸಿದ್ದೇವೆ. ಸಹಕಾರ ನೀಡಿ, ಸೇವೆ ಸಲ್ಲಿಸಿ ಕೈ ಜೋಡಿಸಿದ ಪ್ರತಿಯೊಬ್ಬರಿಗೂ ಹೃದಯಾಂತರಾಳದ ಧನ್ಯವಾದ ತಿಳಿಸುವುದಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ, ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಕೆಲಸ ಮಾಡಿದವರಿಗೆ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾಸನಾಂಬ ಉತ್ಸವದಲ್ಲಿ ಅಧಿಕಾರಿಗಳು, ಸಾರ್ವಜನಿಕರು, ಸಂಘ-ಸAಸ್ಥೆಗಳು, ಪತ್ರಕರ್ತರ ಕೊಡುಗೆ ಸಾಕಷ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು, ಸ್ಥಳೀಯ ಶಾಸಕರಾರ ಹೆಚ್.ಪಿ.ಸ್ವರೂಪ್ ಅವರ ಸಹಕಾರ, ಮಾರ್ಗದರ್ಶನದಿಂದ ಎಲ್ಲವೂ ಸಾಧ್ಯವಾಯಿತು.
ಹಾಸನಾಂಬ ದೇವಿಯ ದರ್ಶನವನ್ನು ಭಕ್ತರಿಗೆ ದಿನದ ೨೪ ಗಂಟೆಗಳ ಕಲ್ಪಿಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆವು. ಹಲವರ ಮಾರ್ಗದರ್ಶನ ಪಡೆದು ಕೊಂಡಿದ್ದರಿಂದ ಸುಸೂತ್ರವಾಗಿ ಸಾಗಲು ಅನುಕೂಲವಾಯಿತು. ಈ ಬಾರಿ ವಾರ್ ರೂಂ, ಸಿಸಿಟಿವಿ, ವಾಕಿಟಾಕಿ ತಂತ್ರಜ್ಞಾನ ಅಳವಡಿಸಿ ಕೊಂಡಿದ್ದರಿAದ ಹೆಚ್ಚಿನ ನೆರವಾಯಿತು ಎಂದು ಹೇಳಿದರು.
ಉತ್ಸವಕ್ಕೆ ಸಿದ್ಧತೆ ಆರಂಭಿಸಿದ ಮೊದಲ ಕಾರ್ಯವಾಗಿ ದೇವಸ್ಥಾನದ ಪಕ್ಕದಲ್ಲಿದ್ದ ಅರ್ಚಕರ ಮನೆ ಖರೀದಿ, ದೇವಸ್ಥಾನ ದುರಸ್ತಿ, ಕಳಸ ಬದಲಾಯಿಸುವ ಪ್ರಕ್ರಿಯೆ, ಭಕ್ತರಿಗೆ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿತ್ತು. ದರ್ಶನಕ್ಕೆ ಬಂದಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿದ್ದಾರೆ. ದೇವಾಲಯದ ಆವರಣದಲ್ಲಿ ಗುಣಾತ್ಮಾಕ ವಾತಾವರಣ ಸೃಷ್ಟಿಯಾಗಿತ್ತು. ಇದೆಲ್ಲವೂ ದೇವಿಯ ದಯೆಯಿಂದಲೇ ನಡೆದಿದೆ ಎಂದರು.
ಉತ್ಸವ ನಮ್ಮ ಪಾಲಿಗೆ ಒಂದು ರೀತಿಯಲ್ಲಿ ಚದುರಂಗದ ಆಟವಾಗಿದ್ದು, ನಾನು ಕ್ಯಾಪ್ಟನ್ ರೀತಿಯಲ್ಲಿದ್ದರೆ, ಉಪವಿಭಾಗಾಧಿಕಾರಿ ಮಾರುತಿ ಅವರು, ಮಂತ್ರಿ ರೀತಿ ಕೆಲಸ ಮಾಡಿದರು. ಜವಾಬ್ದಾರಿ ಹಂಚಿಕೆ ವಿಚಾರದಲ್ಲೂ ಉತ್ತಮವಾಗಿ ನಿರ್ವಹಿಸಿದರು. ಈ ವೇಳೆ ಅಧಿಕಾರಿಗಳು, ಪೊಲೀಸರು, ಸೌಟ್ಸ್ ಅಂಡ್ ಗೈಡ್ಸ್ ಎನ್‌ಎಸ್‌ಎಸ್, ಎನ್‌ಸಿಸಿ, ಸೇವಾದಳ, ಸ್ವಯಂ ಸೇವಕ ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜಿ.ಪಿ.ಆರ್.ಸಿಂಧ್ಯಾ ಮಾತನಾಡಿದರು, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಉಪ ವಿಭಾಗಾಧಿಕಾರಿಗಳಾದ ಮಾರುತಿ, ಶ್ರುತಿ, ಜಿಪಂ ಸಿಇಒ ಪೂರ್ಣಿಮಾ, ಎಎಸ್ಪಿ ತಮ್ಮಯ್ಯ ಇತರರಿದ್ದರು.