ನಂಬಿದವರಿಗೆ ಮೋಸ ಮಾಡಿಲ್ಲ; ದೇಹದಲ್ಲಿ ಶಕ್ತಿ ಇರುವರೆಗೂ‌ ನಾಡಿಗಾಗಿ ಹೋರಾಡ್ತೀನಿ; ಎಚ್.ಡಿ.ದೇವೇಗೌಡ

ಹಾಸನ: ನಮ್ಮನ್ನು ನಂಬಿದವರಿಗೆ ನಾವು ಮೋಸ ಮಾಡಿಲ್ಲ, ಭಗವಂತ ನನಗೆ ಇನ್ನೆಷ್ಟು ಆಯಸ್ಸು ಕೊಟ್ಟಿದ್ದಾನೆ ಗೊತ್ತಿಲ್ಲ. ಆದರೆ ನನ್ನ ಶಕ್ತಿ ಇರುವವರೆಗೂ ನಾಡಿಗಾಗಿ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದರು.

ಚನ್ನರಾಯಪಟ್ಟಣ ತಾಲ್ಲೂಕಿನ, ಹಿರಿಸಾವೆ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಜಂಟಿ ಸಭೆಯಲ್ಲಿ ಮಾತನಾಡಿದರು.

ನನಗೆ ಈಗ 91 ವರ್ಷ ವಯಸ್ಸು, ದೇವರು ಇನ್ನೂ ಎಷ್ಟು ದಿನ ಆಯಸ್ಸು ಕೊಡ್ತಾನೋ ಗೊತ್ತಿಲ್ಲ. ಈ ದೇಹದಲ್ಲಿ ಶಕ್ತಿ ಇರುವವರೆಗೂ, ನನ್ನ ತಲೆಯಲ್ಲಿ ಬುದ್ದಿ ಇರುವವರೆಗೂ ಈ ಜನಕ್ಕಾಗಿ ಹೋರಾಟ ಮಾಡ್ತಿನಿ. ನನಗೆ ನಿಲ್ಲಲು ಆಗಲ್ಲ, ಆದರೆ ಬುದ್ದಿ ಶಕ್ತಿ ಇದೆ ಎಂದರು.