ಹಾಸನ; ಎತ್ತಿನಹೊಳೆ ಯೋಜನೆಯ ಹೆಬ್ಬನಹಳ್ಳಿ ಚೆಕ್‌ಡ್ಯಾಂನಿಂದ ಪ್ರಾಯೋಗಿಕವಾಗಿ ನೀರು ಬಿಡುಗಡೆ ಮಾಡಿದ್ದು, ಪೈಪ್‌ಲೈನ್ ಸೋರಿಕೆಯಾಗಿ ರೈತರ ಜಮೀನಿನಲ್ಲಿ ಕಾರಂಜಿಯಂತೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಬೆಳೆನಷ್ಟ ಸಂಭವಿಸಿದೆ.
ಚೆಕ್‌ಡ್ಯಾಂನಿಂದ ಇಂದು ಪ್ರಾಯೋಗಿಕವಾಗಿ ನೀರು ಹರಿಸಿದ ವೇಳೆ ಪೈಪ್‌ಲೈನ್‌ನಲ್ಲಿ ಸೋರಿಕೆ ಉಂಟಾಗಿದೆ. ಮಾಸವಳ್ಳಿ ಗ್ರಾಮದ ಜಯಚಂದ್ರು, ಮಲ್ಲಪ್ಪಗೌಡ ಎಂಬುವವರ ಜಮೀನಿನಲ್ಲಿ ಪೈಪ್ ಲೈನ್ ನಿಂದ ಕಾರಂಜಿಯಂತೆ ನೀರು ಚಿಮ್ಮುತ್ತಿದೆ.
ರೈತರ ಜಮೀನುಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿ ಅಡಿಕೆ ಹಾಗೂ ಜಾನುವಾರುಗಳಿಗೆಂದು ಬೆಳೆದಿದ್ದ ಮೇವು ಜಲಾವೃತವಾಗಿದೆ. ಅಲ್ಲದೇ ಭಾರಿ ಪ್ರಮಾಣದಲ್ಲಿ ನೀರು ಪೋಲಾಗಿದೆ.