ಹಾಸನಕ್ಕೆ ಹೊರಟ ಮೊದಲ ದಿನವೇ ಕಣ್ಣಿಗೆ ಪಟಾಕಿ ಕಿಡಿ ಬಿತ್ತು, ವಾಮಾಚಾರ ಮಾಡ್ತಿದ್ದಾರೆ ಹೋಗ್ಬೇಡಿ ಅಂದಿದ್ರು: ಸಚಿವ ರಾಜಣ್ಣ

ನಾವು ಉಗ್ರ ನರಸಿಂಹ ಸ್ವಾಮಿ ಭಕ್ತರು. ಹಾಗಾಗಿ, ನಮಗೆ ಯಾವ ವಾಮಾಚಾರನೂ ತಾಗುವುದಿಲ್ಲ.

ತುಮಕೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ವಾಮಾಚಾರ ನಡೆದಿತ್ತಾ? ಇಂತಹದ್ದೊಂದು ಸಂದೇಹವನ್ನು ಸ್ವತಃ ಕೆ.ಎನ್. ರಾಜಣ್ಣ ಹುಟ್ಟು ಹಾಕಿದ್ದಾರೆ.

ನನಗೂ, ಹಾಸನಕ್ಕೂ ಏನ್ ಸಂಬಂಧ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿ ಕೊಟ್ಟಿದ್ದಾರೆ. ಕೆಲವರು ನನ್ನ ಅಭಿಮಾನಿಗಳು ಹೆದರಿಕೊಂಡು ನೀವು ಹಾಸನಕ್ಕೆ ಹೋಗುವುದು ಬೇಡ, ಅಲ್ಲಿ ವಾಮಾಚಾರ ಮಾಡುತ್ತಾರೆ. ಹೋಗಬೇಡಿ ಅಂದರು.

ನಾವು ಉಗ್ರ ನರಸಿಂಹ ಸ್ವಾಮಿ ಭಕ್ತರು. ಹಾಗಾಗಿ, ನಮಗೆ ಯಾವ ವಾಮಾಚಾರನೂ ತಾಗುವುದಿಲ್ಲ. ಹಾಗಂತ ವಾಮಾಚಾರ ತಾಗುವುದಿಲ್ಲ ಅಂದುಕೊಳ್ಳಬೇಡಿ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

‘ನಾನು ಹಾಸನಕ್ಕೆ ಮೊದಲ ದಿನ ಹೋಗು ತ್ತಿದ್ದಾಗ ಕುಣಿಗಲ್‌ನಲ್ಲಿ ಪಟಾಕಿ ಸಿಡಿದು, ಕಣ್ಣಿಗೆ ಏಟಾಗಿತ್ತು. ಡಾಕ್ಟರ್‌ಕಣ್ಣು ಕ್ಲೀನ್ ಮಾಡಿ ಹಾಸನಕ್ಕೆ ಹೋಗುವುದು ಬೇಡ ಎಂದಿದ್ದರು. ಎರಡೂ ಕಣ್ಣು ಹೋದರೂ ಪರವಾಗಿಲ್ಲ ಎಂದು ಧೈರ್ಯದಿಂದ ಹೋದೆ’ ಎಂದರು.