ಸ್ನೇಹಿತನ ಕೊಂದು ಶಿರಾಡಿ ಪ್ರಪಾತಕ್ಕೆ ಶವ ಎಸೆದ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹರಳಹಳ್ಳಿ ಗ್ರಾಮಸ್ಥರ ಆಕ್ರೋಶಭರಿತ ಪ್ರತಿಭಟನೆ

ಹಾಸನ: ಜಾನುವಾರು ಕಳ್ಳತನ ವಿಚಾರ ಬಾಯ್ಬಿಡುತ್ತಾನೆಂದು ಸ್ನೇಹಿತನನ್ನೇ ಕೊಂದ ಆರೋಪಿಗಳ ಬಂಧಿಸಬೇಕೆಂದು‌ ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಹರಳಹಳ್ಳಿ ಗ್ರಾಮಸ್ಥರು ಪ್ರತಿಭಟನೆನಡೆಸುತ್ತಿದ್ದಾರೆ.ಹರಳಹಳ್ಳಿ ಗ್ರಾಮದ ಶಿವಕುಮಾರ್ (34) ಮೃತ. ಅದೇ ಗ್ರಾಮದ ಪ್ರದೀಪ್ ಹಾಗು ಶರತ್ ಕೊಲೆ ಆರೋಪಿಗಳು.

ಕಂಠ ಪೂರ್ತಿ ಕುಡಿಸಿ ಗುಂಡ್ಯ ಬಳಿ ಪ್ರಪಾತಕ್ಕೆ ಶವ ಎಸೆದಿದ್ದರು. ಈ ಸಂಬಂಧ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಸ್‌ಪಿ ಮುರುಳಿಧರ್, ಸಿಪಿಐಗಳಾದ ಮಂಜುನಾಥ್, ಮೋಹನ್‌ಕೃಷ್ಣ ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ಪಟ್ಟರು.