ಹಾಸನ: ಬೇಲೂರು ತಾಲೂಕು ನಂದಗೋಡನಹಳ್ಳಿಯ ಮರಗಳ ಹನನ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರನ್ನು ಶನಿವಾರ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಚರ್ಚ್
ವಿಚಾರಣೆಗೆ ಹಾಜರಾಗದ ವಿಕ್ರಂ ಅವರು ಬೆಂಗಳೂರಿನಲ್ಲಿರುವ ಸುಳಿವು ಪಡೆದ ಅರಣ್ಯ ಇಲಾಖೆಯ ತನಿಖಾ ತಂಡ ಬೆಂಗಳೂರು ಪೊಲೀಸರ ನೆರವಿನೊಂದಿಗೆ ಶನಿವಾರ ಸಂಜೆ ವಿಕ್ರಂ ಅವರನ್ನು ಬಂಧಿಸಿದೆ.
ಹಾಸನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಭುಗೌಡ ಬಿರಾದಾರ್ ನೇತೃತ್ವದ ಜಂಟಿ ತಂಡ, ಬೆಂಗಳೂರಿನ ಎಸಿಪಿ (ಅಪರಾಧ ವಿಭಾಗ) ನೆರವಿನೊಂದಿಗೆ ಹೆಚ್ಚಿನ ವಿಚಾರಣೆಗಾಗಿ ಅವರನ್ನು ತನಿಖಾ ತಂಡ ಬೇಲೂರಿಗೆ ಕರೆತರುತ್ತಿದೆ.