ಪತ್ರಕರ್ತ ವಿಜಯಕುಮಾರ್ ಸಿಗರನಹಳ್ಳಿಗೆ ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

ಬೆಂಗಳೂರು: ಪ್ರಜಾವಾಣಿ ಪತ್ರಿಕೆ ಹಿರಿಯ ವರದಿಗಾರ ವಿಜಯಕುಮಾರ್ ಸಿಗರನಹಳ್ಳಿ ಅವರಿಗೆ ಐಎಂಎಸ್ ಆರ್ ಕೊಡಮಾಡುವ ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿಯನ್ನು ಶನಿವಾರ ಶೇಷಾದ್ರಿಪುರಂನ ಗ್ರೀನ್ ಪಾತ್ ಆರ್ಗ್ಯಾನಿಕ್ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.

ಹಿರಿಯ ಪತ್ರಕರ್ತ ಕೆ.ಪಿ. ಕೃಷ್ಣಪ್ರಸಾದ್, ವಿಜ್ಞಾನ ಲೇಖಕ ಉದಯಶಂಕರ ಪುರಾಣಿಕ್, ಐಎಂಎಸ್ ಆರ್ ನ ಅಧ್ಯಕ್ಷ ಡಾ.ಕೆ.ವಿ.ನಾಗೇಶ್, ಪತ್ರಕರ್ತ ರೋಹಿತ್ ಪಾಲಕರಾದ ಸಿ.ರಾಜಣ್ಣ, ಕೆ.ವಿ.ಲಲಿತಾ ಅವರು ವಿಜಯಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ವಿಜಯಕುಮಾರ್ ಅವರ ತಾಯಿ ಕಾಳಮ್ಮ, ಪತ್ನಿ ರತ್ನಾ ಅವರನ್ನೂ ಅಭಿನಂದಿಸಲಾಯಿತು.