ಅಗಲಿದ ಪತ್ರಕರ್ತ ಜಯಕುಮಾರ್ ಮತ್ತು ಕೆ.ಲಕ್ಷ್ಮಣ್ ಅವರಿಗೆ ಕೆಯುಡಬ್ಲ್ಯೂಜೆ ಶ್ರದ್ದಾಂಜಲಿ

ನುಡಿನಮನ ಸಲ್ಲಿಸಿದ ಪತ್ರಕರ್ತರು

ಬೆಂಗಳೂರು: ಈಚೆಗೆ ಅಗಲಿದ ಹಿರಿಯ ಪತ್ರಕರ್ತರಾದ ಆರ್.ಜಯಕುಮಾರ್ & ಕೆ.ಲಕ್ಷ್ಮಣ್ ಅವರಿಗೆ ಕೆಯುಡಬ್ಲ್ಯೂಜೆ ವತಿಯಿಂದ ಇಂದು ಶ್ರದ್ದಾಂಜಲಿ ಅರ್ಪಿಸಲಾಯಿತು.

ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಉದಯ ಟಿವಿ ಮತ್ತಿತರ ಮಾಧ್ಯಮದಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಆರ್.ಜಯಕುಮಾರ್ ಮತ್ತು ಭೂಮಿಕಾ ಪತ್ರಿಕೆ ಸಂಪಾದಕರು, ಬೆಂಗಳೂರು ನಗರ ಘಟಕದ ಕಾರ್ಯದರ್ಶಿ ಕೆ.ಲಕ್ಷ್ಮಣ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ  ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ನುಡಿನಮನ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ರಾಜಾಶೈಲೇಶಚಂದ್ರ ಗುಪ್ತ, ಜಿ.ಎನ್.ಮೋಹನ್, ಕಂಕ ಮೂರ್ತಿ, ಬೋಪಯ್ಯ, ಶ್ರೀಜಾ, ಡಾ.ಲೀಲಾಸಂಪಿಗೆ, ಆರ್.ಎಸ್.ಆರಾಧ್ಯ, ಈ.ಬಸವರಾಜು ಕೆಯುಡಬ್ಲ್ಯೂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಮತ್ತಿತರರು ಮಾತನಾಡಿದರು.