ಸಿದ್ದಗಂಗಾ ಮತ್ತು ಸುತ್ತೂರು ಶ್ರೀಗಳಿಂದ ವಿ ಕೇರ್ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಲೋಕಾರ್ಪಣೆ

ಹಾಸನ: ನಗರದ ಕೆ.ಆರ್. ಪುರಂ ಮೂರನೇ ಕ್ರಾಸ್ ನಲ್ಲಿರುವ ಐ.ಡಿ.ಬಿ. ಬ್ಯಾಂಕ್ ಬಳಿ ಕೆಂಚಾಂಬ ಆರ್ಕೇಡ್ ನಲ್ಲಿರುವ ವಿ ಕೇರ್ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಅನ್ನು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹಾಗೂ ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳು ಇಂದಿನ ಕಾಲಮಾನಕ್ಕೆ ಅಗತ್ಯವಾಗಿ ಬೇಕಿದೆ. ರೋಗಿಯ ಚಿಕಿತ್ಸೆಯ ವಿಧಾನಗಳು ಸರಳಿಕೃತಗೊಂಡರೆ ಅವರಲ್ಲಿ ಮೂಡಬಹುದಾದ ಅನಗತ್ಯ ಭಯ, ಒತ್ತಡಕ್ಕೆ ತೆರೆ ಎಳೆದಂತಾಗುತ್ತದೆ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀ ಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗುತ್ತದೆ. ಇದರೊಟ್ಟಿಗೆ ವೈದ್ಯರು ರೋಗಿಗಳ ಆರ್ಥಿಕ ಪರಿಸ್ಥಿತಿ ಮನದಲ್ಲಿಟ್ಟುಕೊಂಡು ಸೇವೆ ಮಾಡಬೇಕು ಎಂದು ಕಿವಿಮಾತು ತಿಳಿಸಿದರು. ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಖಾಯಿಲೆಗಳಿಗೆ ತುತ್ತಾದಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳುವ ನೆಟ್ಟಿನಲ್ಲಿ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ರೋಟರಿ ಕ್ಲಬ್ ಆಫ್ ಕ್ವಾಂಟಾದಿಂದ AI ಡೆಂಟಲ್ ರೋಬೊಟ್ ಕೊಡುಗೆ:

ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡ ವಿ ಕೇರ್ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಗೆ ರೋಟರಿ ಕ್ಲಬ್ ಆಫ್ ಕ್ವಾಂಟಾದಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಡೆಂಟಲ್ ರೋಬೊಟ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಈ ಯಂತ್ರದಿಂದ ಬಹಳ ಸರಳವಾಗಿ ಬಾಯಿ ಕ್ಯಾನ್ಸರ್ ಸೇರಿದಂತೆ ಬಾಯಿಗೆ ಸಂಬಂಧಿಸಿದಂತಹ ಖಾಯಿಲೆಗಳನ್ನು ಸ್ಕ್ಯಾನಿಂಗ್ ಮೂಲಕ ಕಂಡು ಹಿಡಿಯಬಹುದಾಗಿದ್ದು,ಇದರ ಸದುಪಯೋಗ ಪಡೆದುಕೊಳ್ಳಲು ಜನತೆಗೆ ರೋಟರಿ ಕ್ವಾಂಟಾ ಅಧ್ಯಕ್ಷ ಬಿ.ಆರ್. ಬೊಮ್ಮೇಗೌಡ ಮನವಿ ಮಾಡಿದರು.

ಈ ವೇಳೆ ವಿವಿಧ ಮಠಗಳ ಸ್ವಾಮೀಜಿಗಳು, ವಿ ಕೇರ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾಕ್ಟರ್ ವೈಭವ್, ಡಾ. ಸ್ಮಿತಾ ವೈಭವ್, ಡಾ. ಅಭಿರೂಪ್, ಡಾ.ಸೌಮ್ಯಮಣಿ, ರೋಟರಿ ಕ್ಲಬ್ ಆಫ್ ಕ್ವಾಂಟಾ ಅಧ್ಯಕ್ಷ ಬಿ.ಆರ್, ಬೊಮ್ಮೇಗೌಡ, ಕಾರ್ಯದರ್ಶಿ ನಾಗೇಶ್ ಬೆಳ್ಳೂರು ಶಾಖೆಯ ವ್ಯವಸ್ಥಾಪಕರಾದ ಅಭಿರೂಪ್ ಇತರರು ಉಪಸ್ಥಿತರಿದ್ದರು.