ಹೊಳೆನರಸೀಪುರದಲ್ಲಿ ತಿರುಚನಾಪಳ್ಳಿಯ ಸಿದ್ದರೊಂದಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೆಂಪಲ್ ರನ್! HDK

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಇಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಮಿಳುನಾಡಿನ ತಿರುಚನಾಪಳ್ಳಿಯ ಸಿದ್ದರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಅವರೊಂದಿಗೆ ಸಹೋದರ,‌ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಉಪಸ್ಥಿತರಿದ್ದರು. ದೇವಾಲಯದಲ್ಲಿ ನೆಲದ ಮೇಲೆ ಕುಳಿತು ಅವರು ಪೂಜೆ ಸಲ್ಲಿಸಿದರು.

 ಬಳಿಕ ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿರುವ ಕುಲದೈವ ದೇವೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ತಮಿಳುನಾಡಿನ ತಿರುಚನಪಲ್ಲಿಯಿಂದ ಎಚ್.ಡಿ.ಕೆ. ಅವರೊಂದಿಗೆ ‘ಸಿದ್ಧ’ ಮಸಿ ಸಿವ ಚಿತ್ತಂ ಎಂಬುವರು ಮೂರು ದೇವಾಲಯಗಳಿಗೂ ಭೇಟಿ ನೀಡಿದರು.