ಕಲಿಕಾ ಫೌಂಡೇಶನ್ ನಿಂದ ಬಿಬಿಎಂಪಿ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ

ಬೆಂಗಳೂರು; ಸೂರ್ಯ ಉದಯಿಸುತ್ತಿದ್ದಂತೆ ಉದ್ಯಾನ ನಗರಿ ಬೆಂಗಳೂರನ್ನು ಸ್ವಚ್ಛಗೊಳಿಸುವ ಬಿಬಿಎಂಪಿ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಎಂದೂ ಕಾಳಜಿ ವಹಿಸಲ್ಲ.‌ ಹೀಗಾಗಿ ನಮ್ಮ ನಗರವನ್ನ ಆರೋಗ್ಯಕರವಾಗಿರಿಸೋ ಪೌರಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು ಎಂದು ಕಲಿಕಾ ಫೌಂಡೇಶನ್ ಮುಖ್ಯಸ್ಥೆ ಸಪ್ನಾ ಸಿಂಗ್‌ ತಿಳಿಸಿದರು.

ವಿಶ್ವ ಆರೋಗ್ಯ ದಿನದ ಅಂಗವಾಗಿ ಕಲಿಕಾ ಫೌಂಡೇಶನ್ ಮುಖ್ಯಸ್ಥೆ, ಸಾಮಾಜಿಕ ಕಾರ್ಯಕರ್ತೆ ಸಪ್ನಾ ಸಿಂಗ್ ನೇತೃತ್ವದಲ್ಲಿ ಇಂದು ಸದಾಶಿವ ನಗರದ ಲೋ ಲೆವೆಲ್ ಉದ್ಯಾನ ವನದಲ್ಲಿ ಪೌರಕಾರ್ಮಿಕರಿಗಾಗಿ‌ ಉಚಿತ‌ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 50ಕ್ಕೂ ಅಧಿಕ ಪೌರಕಾರ್ಮಿಕರ ರಕ್ತ ಪರೀಕ್ಷೆ, ಮಧುಮೇಹ, ಹಿಮೋಗ್ಲೋಬಿನ್, ಕಣ್ಣು ಪರೀಕ್ಷೆ ಹಾಗೂ ದಂತಪರೀಕ್ಷೆ ನಡೆಸಲಾಯಿತು.

ಮೂವತ್ತು ಅಧಿಕರ ಯುವಕರು ರಕ್ತದ ದಾನಮಾಡಿ ಮಾದರಿ ಎನಿಸಿಕೊಂಡರು. ನವಜೀವನ್ ವೈದ್ಯಕೀಯ ಪರಿಹಾರ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯರು ಹಾಗೂ ಸಿಬ್ಬಂದಿ ಆರೋಗ್ಯ ತಪಾಸಣಾ ಹಾಗೂ ರಕ್ತದಾನ‌ ಶಿಬಿರದಲ್ಲಿ ಸಹಕರಿಸಿದರು.