ಹಾಸನದ ಆಗಸದಲ್ಲಿ ಹೆಲಿಕಾಪ್ಟರ್‌ನಲ್ಲಿ ಹಾರಾಡಿ; ಟಿಕೆಟ್‌ ದರ ₹4200!

ಹಾಸನಾಂಬ ದರ್ಶನದ ಅಂಗವಾಗಿ ಹೆಲಿ ಟೂರಿಸಂ ಅಡಿಯಲ್ಲಿ ಆಗಸದಲ್ಲಿ ಹಾಸನ ಕಾರ್ಯಕ್ರಮ

ಹಾಸನ: ಹಾಸನಾಂಬೆ ಉತ್ಸವದಂದು ವಿವಿಧೆಡೆಗಳಿಂದ ಬರುವ ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣ ನೋಡಲು ಸಕಲೇಶಪುರ ಮಾರ್ಗ, ಬೇಲೂರು-ಹಳೇಬೀಡು, ಅರಸೀಕೆರೆ, ಶ್ರವಣಬೆಳಗೊಳ ಹಾಗೂ ಸಕಲೇಶಪುರ ಪರಿಸರ ಪ್ರವಾಸ ಸೇರಿ ಒಟ್ಟು ೫ ಪ್ಯಾಕೇಜ್ ಮಾರ್ಗ ಸಿದ್ಧಪಡಿಸಲಾಗಿದೆ. ಇದಕ್ಕೆ ಕೆಎಸ್‌ಆರ್‌ಟಿಸಿ ಸಹಯೋಗ ಇದ್ದು ಒಂದು ಬಸ್ ನಲ್ಲಿ ಕನಿಷ್ಟ ೨೦ ಮಂದಿ ಇರಬೇಕು. ವಯಸ್ಕರಿಗೆ, ಮಕ್ಕಳಿಗೆ ಒಂದೊAದು ದರ ನಿಗದಿಪಡಿಸಲಾಗಿದೆ. ಸಕಲೇಶಪುರ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಉಚಿತ ಊಟದ ವ್ಯವಸ್ಥೆ ಇರಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ಪ್ರಥಮ ಬಾರಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಾಸನಾಂಬ ಉತ್ಸವವನ್ನು ಜನೋತ್ಸವ ಮಾಡಬೇಕು ಎಂಬುದು ಜಿಲ್ಲಾಧಿಕಾರಿ ಅವರ ಆಶಯವಾಗಿದೆ. ಇದರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶವೂ ಅಡಗಿದೆ. ಇದರಲ್ಲಿ ಚಾರಣ ಕೂಡ ಇರಲಿದೆ ಎಂದು ಹೇಳಿದರು. ಇದಕ್ಕೆ ಶಕ್ತಿ ಯೋಜನೆ ಅನ್ವಯ ಆಗುವುದಿಲ್ಲ ಎಂದು ತಿಳಿಸಿದರು.
ಇದಲ್ಲದೆ ಹೆಲಿ ಟೂರಿಸಂ ಯೋಜನೆಯಡಿ ನ.೩ ರಿಂದ ೬ ವರೆಗೆ ಆಗಸದಲ್ಲಿ ಹಾಸನ ಕಾರ್ಯಕ್ರಮದಡಿ ವಿಮಾನ ಹಾರಾಟ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ೭ ನಿಮಿಷಕ್ಕೆ ೪,೨೦೦ ರೂ. ರೂ. ನಿಗದಿ ಪಡಿಸಲಾಗಿದೆ. ಕೇವಲ ೫೦೦-೬೦೦ ಅಡಿ ಎತ್ತರದಲ್ಲಿ ಹಾಸನವನ್ನು ಮೇಲಿಂದ ಕಣ್ತುಂಬಿಕೊಳ್ಳಬಹುದು ಎಂದು ವಿವರಿಸಿದರು.
ಯುವ ಜನ ಮತ್ತು ಕ್ರೀಡಾ ಇಲಾಖೆಯಿಂದ ಬೂವನಹಳ್ಳಿ ವಿಮಾನ ನಿಲ್ದಾಣದಲ್ಲಿ ಪ್ಯಾರಾ ಸೈಲಿಂಗ್‌ಗೆ ೫೦೦ ರೂ. ಮೋಟರಿಂಗ್ ಸೈಲಿಂಗ್‌ಗೆ ೨೦೦೦ ರೂ. ನಿಗದಿಪಡಿಸಲಾಗಿದೆ ಎಂದು ಕ್ರೀಡಾಇಲಾಖೆ ಡಿಡಿ ಹರೀಶ್ ವಿವರಿಸಿದರು.