ಹಾಸನ: ನಗರದಲ್ಲಿ ಪುಡಿರೌಡಿಗಳ ಹಾವಳಿ ಮಿತಿಮೀರುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಪುಂಡರಿಬ್ಬರು ಡ್ಯಾಗರ್ ತೋರಿಸಿ ಬೆದರಿಕೆ ಹಾಕಿದ್ದಾರೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ
https://www.instagram.com/reel/DHhuRjTS-q2/?igsh=eDB5cXJqZW43bm9s
ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡ ಪುಂಡರಿಬ್ಬರು ಬಿಲ್ ಹಣ ಕೇಳಿದ ಬಂಕ್ ಹುಡುಗನಿಗೆ ಡ್ಯಾಗರ್ ತೋರಿಸಿ ಬೆದರಿಕೆ ಹಾಕಿ ಹೋಗಿರುವ ಘಟನೆ ನಗರದ ಬಿಟ್ಟಗೌಡನಹಳ್ಳಿಯ ಎಸ್‌ಎಲ್‌ಎನ್ ಫ್ಯೂಯೆಲ್ಸ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.
ಬಂಕ್ ಗೆ ಬಂದ ಇಬ್ಬರು ಸ್ಕೂಟರ್ ಸವಾರರು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಹಣ ಕೇಳಿದಾಗ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಆ ನಂತರ ಹಣ ತಂದುಕೊಡುವುದಾಗಿ ಹೇಳಿದ್ದಾರೆ.
ಅದಕ್ಕೆ ಬಂಕ್ ಸಿಬ್ಬಂದಿ ಒಪ್ಪದಿದ್ದಾಗ ಹಿಂಬದಿ ಸವಾರ ಸ್ಕೂಟರ್ ಫುಟ್ ರೆಸ್ಟ್ ಬಳಿ ಇರಿಸಿದ್ದ ಚೀಲವೊಂದನ್ನು ತೆಗೆದು ಅದರೊಳಗಿದ್ದ ಡ್ಯಾಗರ್ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿ ನಿಂತ ಸಿಬ್ಬಂದಿಗೆ ಹಣ ನೀಡದೇ ಅವರಿಬ್ಬರು ಅಲ್ಲಿಂದ ತೆರಳಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.