ಹಾಸನದಲ್ಲಿ ಹಾಡುಹಗಲೇ ಗುಂಡಿನ ದಾಳಿಗೆ ಇಬ್ಬರು ಬಲಿ!

ಸ್ಥಳಕ್ಕೆ ಎಸ್ಪಿ ಸುಜೀತಾ ದೌಡು| ಫೋರೆನ್ಸಿಕ್ ತಜ್ಞರಿಂದ ಸಾಕ್ಷಿ ಸಂಗ್ರಹ| ಬೆಚ್ಚಿಬಿದ್ದ ಹಾಸನ ಜನತೆ

ಹಾಸನ: ನಗರದ ಹೊಯ್ಸಳ‌ನಗರ ಬಡಾವಣೆ ಯಲ್ಲಿ
ಹಾಡುಹಗಲೇ ಗುಂಡಿಕ್ಕಿ ಇಬ್ಬರನ್ನು ಹತ್ಯೆ ಮಾಡಲಾಗಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಹೊಯ್ಸಳ ನಗರದ ಮುಖ್ಯ ರಸ್ತೆಯಲ್ಲಿಯೇ ನಿಸ್ಸಾನ್ ಟರಾನೋ ಕಾರ್ ನಿಂತಿದ್ದು ಅದರ ಎದುರಿನಲ್ಲಿ ಗುಂಡಿನ ಒಂದು ಹಾಗೂ ಕಾರಿನ ಎಡಬದಿ ಸೀಟಿನಲ್ಲಿ ಮತ್ತೊಂದು ಶವ ಬಿದ್ದಿದ್ದು ಮೃತರ ಗುರುತು ಪತ್ತೆಯಾಗಿಲ್ಲ.

ಘಟನಾ ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜೀತಾ ದೌಡಾಯಿಸಿದ್ದು, ಸ್ಥಳದಲ್ಲಿ ಬೆರಳಚ್ಚು ತಜ್ಞರು ಹಾಗು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸಾಕ್ಷಿ ಕಲೆಹಾಕುತ್ತಿದ್ದಾರೆ. ಆಸ್ತಿ ವಿಚಾರದಲ್ಲಿ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.