ಹಾಸನ : ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.
ತಾಲ್ಲೂಕಿನ ಚಿಕ್ಕತಾರಹಳ್ಳಿ ಗ್ರಾಮದ ಪವನ್ (24), ಟಿ.ನರಸೀಪುರ ಮೂಲದ ಸಂತೋಷ್ (30) ಮೃತರು.
ಪವನ್ ಅವರ ಎರಡು ವರ್ಷದ ಮಗುವಿಗೆ ಚೇಳು ಕಡಿದಿತ್ತು.
KA-01-ED-1114 ನಂಬರ್‌ನ ಹೀರೋ ಹೋಂಡಾ ಸ್ಲೆಂಡರ್ ಬೈಕ್‌ನಲ್ಲಿ ಪತ್ನಿ ರಂಜಿತಾ, ಎರಡು ವರ್ಷದ ಮಗುವಿನ ಜೊತೆ ಚನ್ನರಾಯಪಟ್ಟಣದ ಆಸ್ಪತ್ರೆಗೆ ತೆರಳಿ ಚಿಕ್ಕತಾರಹಳ್ಳಿ ಗ್ರಾಮಕ್ಕೆ ವಾಪಾಸ್ ಆಗುತ್ತಿದ್ದರು.
ಮತ್ತೊಂದೆಡೆ ತಂಗಿಯ ಮದುವೆಯ ಲಗ್ನಪತ್ರಿಕೆ ಕೊಡಲು ಮೈಸೂರು ಕಡೆಯಿಂದ KA-55-EC-7935 ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್‌ನಲ್ಲಿ ಚನ್ನರಾಯಪಟ್ಟಣಕ್ಕೆ ಸ್ನೇಹಿತ ದೇವರಾಜು ಜೊತೆ ಸಂತೋಷ್ ಬರುತ್ತಿದ್ದರು. ಅಡಗೂರು ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾರೆ.
ಗಾಯಾಳುಗಳಿಗೆ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.