ಹಲ್ಮಿಡಿಯಲ್ಲಿ ಬಿರುಗಾಳಿ-ಮಳೆಗೆ ಧರೆಗುರುಳಿದ ಅಡಿಕೆ ಮರಗಳು; ರೈತನಿಗೆ ಭಾರೀ ನಷ್ಟ

ಹಾಸನ: ನಿನ್ನೆ ರಾತ್ರಿ ಭಾರೀ ಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಗೆ ಬೇಲೂರು ತಾಲ್ಲೂಕಿನ, ಹಲ್ಮಿಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಭಾರಿ ಮಳೆ-ಗಾಳಿಗೆ ರವೀಶ್ ಎಂಬುವವರಿಗೆ ಸೇರಿದ ಫಸಲು ಕೊಯ್ಲಿಗೆ ಬಂದಿದ್ದ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ 350ಕ್ಕೂ ಹೆಚ್ಚು ಅಡಿಕೆ ಗಿಡಗಳು ಧರೆಗುರುಳಿದ್ದು ಭಾರಿ ನಷ್ಟ ಸಂಭವಿಸಿದೆ.

ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ಕಳೆದುಕೊಂಡು ಕಂಗಾಲಾದ ರೈತ ರವೀಶ್ ಕಣ್ಣೀರು ಹಾಕಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮಮತಾ ಹಾಗೂ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.