ಬಸ್ ಗಳಿಲ್ಲದೆ ಸಾರ್ವಜನಿಕರ ಪರದಾಟ; ಸಿಎಂ ಕಾರ್ಯಕ್ರಮದ ಎಫೆಕ್ಟ್

ತರಗತಿಗೆ ತಡವಾಗುವ ಆತಂಕದಲ್ಲಿ ವಿದ್ಯಾರ್ಥಿಗಳು

ಹಾಸನ: ನಗರದಲ್ಲಿ ಆಯೋಜನೆಯಾಗಿರುವ ಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲ ತಾಲೂಕುಗಳಿಂದ ಜನರನ್ನು ಕರೆತರಲು ಜಿಲ್ಲಾಡಳಿತ 700 ಕೆ.ಎಸ್.ಆರ್.ಟಿ.ಸಿ. ಬಸ್ ಗಳನ್ನು ನಿಯೋಜಿಸಿರುವುದರಿಂದ ಇಂದು ನಿಯೋಜಿತ ಮಾರ್ಗದಲ್ಲಿ ಬಸ್ ಗಳಿಲ್ಲದೆ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಬಸ್ ಗಳಿಗಾಗಿ ಕಾಯುತ್ತಾ ನಿಂತಿದ್ದು, ಬಸ್ ಗಳು ಬಾರದೇ ಪರದಾಡುತ್ತಿದ್ದಾರೆ. ಕೆಲಸಕ್ಕೆ ಹೋಗುವವರು ಖಾಸಗಿ ವಾಹನಗಳು, ಮ್ಯಾಕ್ಸಿ ಕ್ಯಾಬ್ ಗಳನ್ನು ಅವಲಂಬಿಸುತ್ತಿದ್ದು, ಜನರ ಒತ್ತಡಕ್ಕೆ ತಕ್ಕಷ್ಟು ವಾಹಗಳು ಸಂಚರಿಸದೇ ಅವರು ಪರಿತಪಿಸುತ್ತಿದ್ದಾರೆ.

ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ತಮ್ಮ ನಿತ್ಯದ ಓಡಾಟವನ್ನು ಅಸ್ತವ್ಯಸ್ತಗೊಳಿಸುವುದು ಎಷ್ಟು ಸರಿ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.