ಭಾವುಕ ಪ್ರತಾಪ್ ಸಿಂಹ; ಮೈಸೂರಿನ ಒಂದೊಂದು ಯೋಜನೆಗೂ ಹರಕೆ ಹೊತ್ತಿದ್ದೀನಿ

ಹಾಸನ  : ಮೈಸೂರಿನಲ್ಲಿ ಎಂಪಿ ಆದಾಗಲು ಮೈಸೂರಿಗೆ ಹೈವೆ, ಪಾಸ್‌ಪೋರ್ಟ್ ಸೇವಾಕೇಂದ್ರ, ಏರ್‌ಪೋರ್ಟ್‌ಗೆ 319 ಕೋಟಿ ತರಲು ನನ್ನ ಇಷ್ಟ ದೇವರಿಗೆ ಹರಕೆ ಹೊತ್ತಿದ್ದೀನಿ. ಮೈಸೂರಿನ ಮಾಡಿರುವ ಒಂದೊಂದು ಯೋಜನೆಗೂ ಹರಕೆ ಹೊತ್ತಿದ್ದೀನಿ ಎಂದು ಲೋಕಸಭೆ ಮಾಜಿ ಸದಸ್ಯ ಪ್ರತಾಪ್ ಸಿಂಹ ಭಾವುಕರಾದರು.

 ನಗರದ ಕಲಾಭವನದಲ್ಲಿ ಪ್ರತಿಷ್ಠಾಪಿಸಿರುವ ಪಾಂಚಜನ್ಯ ಹಿಂದು ಗಣಪತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಾನು ದೇವರಲ್ಲಿ ಮನ:ಶಾಂತಿಯನ್ನು ಬಿಟ್ಟು ಬೇರೆ ಏನನ್ನೂ ವೈಯಕ್ತಿಕವಾಗಿ ಕೇಳಲ್ಲ, ನಾನು ಮೈಸೂರಿನಲ್ಲಿ ಎಂಪಿ ಆದಾಗಲು ಮೈಸೂರಿಗೆ ಹೈವೆ, ಪಾಸ್‌ಪೋರ್ಟ್ ಸೇವಾಕೇಂದ್ರ, ಏರ್‌ಪೋರ್ಟ್‌ಗೆ 319 ಕೋಟಿ ರೂ. ಅನುದಾನ ತರಲು ನನ್ನ ಇಷ್ಟ ದೇವರಿಗೆ ಹರಕೆ ಹೊತ್ತಿದ್ದೀನಿ. ಮೈಸೂರಿನಲ್ಲಿ ಮಾಡಿರುವ ಒಂದೊಂದು ಯೋಜನೆಗೂ ಹರಕೆ ಹೊತ್ತಿದ್ದೀನಿ ಎಂದರು.

ನಾನು ವೈಯಕ್ತಿಕವಾಗಿ ಮನಃಶಾಂತಿ, ಆರೋಗ್ಯ ಬಿಟ್ಟು ಬೇರೇನೂ ಕೇಳಲ್ಲ. ಏನೇ ಕೇಳಿದರೂ ಕ್ಷೇತ್ರದ‌ ಜನತೆಗೆ ಅಭಿವೃದ್ಧಿಗೆ ಕೇಳ್ತಿನಿ, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ
ಏನಾಗುತ್ತೆ ಅಂತ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅಂತ ಗೊತ್ತಿಲ್ಲ ಎಂದರು.