ಹೊಳೆನರಸೀಪುರ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಹೊಳೆನರಸೀಪುರ, ಮಾ. 18: ಸಾಲದ ಬಾಧೆಯಿಂದ ಬೇಸತ್ತ ಹಳೇಕುಂಚೆ ಗ್ರಾಮದ ರೈತ ರಂಗಸ್ವಾಮಿ ಎಚ್.ಜೆ. (52) ಸೋಮವಾರ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

2007ರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ 5 ಲಕ್ಷ ರೂ. ಮತ್ತು ಕೃಷಿ ಪತ್ತಿನ ಸಹಕಾರ ಸಂಘದಿಂದ 50 ಸಾವಿರ ರೂ. ಸಾಲ ಪಡೆದಿದ್ದ ಅವರು, ಸಾಲ ತೀರಿಸಲಾಗದೆ ಖಿನ್ನತೆಗೆ ಒಳಗಾಗಿದ್ದರು. ಸಾಲದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಈ ಬಗ್ಗೆ ಮೃತರ ಪತ್ನಿ ಜಯಮ್ಮ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.