ಚೆನ್ನಾಂಬಿಕಾ ನಿವಾಸಕ್ಕೆ ಆಗಮಿಸಿದ ವಕೀಲರು: ಭವಾನಿರೇವಣ್ಣ ಹಾಜರಾಗುವ ಸೂಚನೆಯೇ?

ಹಾಸನ: ಭವಾನಿ ರೇವಣ್ಣ ವಿಚಾರಣೆಗೆ ಎಸ್ಐಟಿ ನಿಗದಿಪಡಿಸಿದ್ದ ಸಮಯ ಮುಕ್ತಾಯಗೊಳ್ಳಲು ಕೇವಲ ಎರಡು ಗಂಟೆಯಿರುವಾಗ ಎಚ್.ಡಿ.ರೇವಣ್ಣ ನಿವಾಸಕ್ಕೆ ಭವಾನಿ ರೇವಣ್ಣ ಪರ ಮೂವರು ಮಹಿಳಾ ವಕೀಲರು ಚೆನ್ನಾಂಬಿಕಾ ನಿವಾಸಕ್ಕೆ ಆಗಮಿಸಿದ್ದಾರೆ.

ಬೆಳಗ್ಗೆಯಿಂದ ಭವಾನಿ ರೇವಣ್ಣ ಅವರಿಗಾಗಿ ಇನ್ಸ್ ಪೆಕ್ಟರ್ ಶ್ರೀಧರ್ ನೇತೃತ್ವದ ಎಸ್ಐಟಿ ತಂಡ ಭವಾನಿ ಅವರಿಗಾಗಿ ಮನೆ ಬಳಿ ಕಾದು ನಿಂತಿದೆ. ಆದರ ಭವಾನಿ ಅವರು ಇನ್ನೂ ವಿಚಾರಣೆಗೆ ಹಾಜರಾಗಿಲ್ಲ. ಹೀಗಿರುವಾಗ ವಕೀಲರು ಆಗಮಿಸಿರುವುದು ಕುತೂಹಲ ಮೂಡಿಸಿದೆ.