ಹಾಸನ: ಎಟಿಎಂ‌ ಮಷೀನ್ ಮಾನೀಟರ್ ಗಾಜು ಒಡೆದು ಕಳವಿಗೆ ಯತ್ನಿಸಿದ ಕಳ್ಳರು

ಹಾಸನ, ಏಪ್ರಿಲ್ 05: ಸಕಲೇಶಪುರ ತಾಲ್ಲೂಕಿನ ಶುಕ್ರವಾರಸಂತೆ ಗ್ರಾಮದಲ್ಲಿ ಕೆನರಾ ಬ್ಯಾಂಕ್‌ಗೆ ಸೇರಿದ ಎಟಿಎಂ ಒಂದರಲ್ಲಿ ಹಣ ಕದಿಯಲು‌ ಕಳ್ಳರು ಯತ್ನ ವಿಫಲವಾಗಿದೆ.

ಎಟಿಎಂ ಮಾನಿಟರ್‌ನ ಗಾಜನ್ನು ಒಡೆದು ಒಳಗಿನ ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ದುಷ್ಕರ್ಮಿಗಳು, ಯಶಸ್ವಿಯಾಗದೇ ವಾಪಾಸ್ ಆಗಿದ್ದಾರೆ.

ಈ ಘಟನೆ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ನ ತಾಂತ್ರಿಕ ತಂಡವು ಎಟಿಎಂನಲ್ಲಿರುವ ಹಣವನ್ನು ಪರಿಶೀಲಿಸುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.