ಹಾಸನ: ಹೊಳೆನರಸೀಪುರದ ವೆಲ್ಡಿಂಗ್ ವರ್ಕ್ಸ್ ನಲ್ಲಿ ನಿನ್ನೆ ರಾತ್ರಿ ಬಾಗಿಲು ಬೀಗ ಮುರಿದು ಒಳ ನುಗ್ಗಿರುವ ಕಳ್ಳರು 1.25 ಲಕ್ಷ ರೂ. ಮೌಲ್ಯದ ತಾಮ್ರದ ತಂತಿ ಹಾಗೂ ಟೈರ್ ಗಳನ್ನು ಹೊತ್ತೊಯ್ದಿದ್ದಾರೆ.
ಹಾಸನ-ಮೈಸೂರು ರಸ್ತೆಯಲ್ಲಿರುವ ಉಮರ್ ಅಗ್ರೋ ಇಂಡಸ್ಟ್ರೀಸ್ ನಲ್ಲಿ ಕಳವು ನಡೆದಿದ್ದು ಈ ಸಂಬಂಧ ಘಟಕದ ಮಾಲೀಕ ನಾಸೀರ್ ಅಹಮದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಫೆಬ್ರವರಿ 13ರ ರಾತ್ರಿ 9:30ರ ಸುಮಾರಿಗೆ ಕಳ್ಳತನ ಸಂಭವಿಸಿದೆ ಎಂದು ತಿಳಿಸಿದ್ದು ಕಳ್ಳರ ಕರಾಮತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.