ಅಮ್ಮ-ಮಗ ಇಬ್ಬರೂ ಒಟ್ಟಿಗೇ ಎಸ್.ಎಸ್.ಎಲ್.ಸಿ. ಪಾಸ್!

ಅಮ್ಮ-ಮಗ ಇಬ್ಬರೂ ಒಟ್ಟಿಗೇ ಪರೀಕ್ಷೆ ಬರೆದಿದ್ದರು

ಹಾಸನ: ಇಂದು ಪ್ರಕಟವಾದ ಎಸ್‌ಎಸ್‌ಎಲ್ ಪರೀಕ್ಷೆ ಫಲಿತಾಂಶದಲ್ಲಿ ಅಪರೂಪದ ವಿಷಯವೊಂದಿದೆ. ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ತಾಯಿ-ಮಗ ಇಬ್ಬರೂ ಪಾಸ್ ಆದ ಖುಷಿ ಅನುಭವಿಸುತ್ತಿದ್ದಾರೆ!

ನಿತಿನ್ ಅಂಕಪಟ್ಟಿ

ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮದ ನಿವಾಸಿಯಾದ ಭುವನೇಶ್ ಪತ್ನಿ ಪಿ.ಆರ್.ಜ್ಯೋತಿ (38) ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದರೆ, ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ವಿವೇಕ ಕಾನ್ವೆಂಟ್ ವಿದ್ಯಾರ್ಥಿಯಾಗಿ ಮಗ ಸಿ.ಬಿ. ನಿತಿನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದನು.

ಜ್ಯೋತಿ ಅಂಕಪಟ್ಟಿ

ಇಂದು ಫಲಿತಾಂಶ ಪ್ರಕಟವಾಗಿದ್ದು 250 ಅಂಕ ಪಡೆದು ಪಿ.ಆರ್. ಜ್ಯೋತಿ ಹಾಗೂ ಅವರ ಪುತ್ರ ಸಿ.ಬಿ.ನಿತಿನ್ 582 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ಅಮ್ಮ-ಮಗ ಇಬ್ಬರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಕುಟುಂಬದಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ.