ಹಾಸನ ರೈಲ್ವೆ ಮೇಲ್ಸೇತುವೆ ಸಿದ್ಧ; ಡಿಸೆಂಬರ್‌ ನಲ್ಲಿ ಉದ್ಘಾಟನೆ

ಹಾಸನ: ಐದು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ನಗರದ ಹೊಸ ಬಸ್‌ ನಿಲ್ದಾಣ ಸಮೀಪದ ರೈಲ್ವೆ ಮೇಲ್ಸೇತುವೆ ಒಂದು ಭಾಗದ ಕಾಮಗಾರಿ ಪೂರ್ಣಗೊಂಡಿದೆ.

ಮಂಗಳವಾರ ಅಂತಿಮ ಹಂತದ ಡಾಂಬರೀಕರಣ ಕಾಮಗಾರಿ ನಡೆದಿದ್ದು, ಸಂಸದ ಪ್ರಜ್ವಲ್‌ ರೇವಣ್ಣ, ಶಾಸಕ ಸ್ವರೂಪ್‌ ಪ್ರಕಾಶ್‌ ಕಾಮಗಾರಿ ವೀಕ್ಷಿಸಿದರು.

ಡಿಸೆಂಬರ್‌ ನಲ್ಲಿ ಮೊದಲ ಹಂತದ ಕಾಮಗಾರಿ ಉದ್ಘಾಟನೆಯಾಗಲಿದ್ದು, ಐದು ವರ್ಷಗಳ ಸಾರ್ವಜನಿಕರ ಪಡಿಪಾಟಲು ಅಂತ್ಯವಾಗುವ ನಿರೀಕ್ಷೆ ಇದೆ.