ಸಕಲೇಶಪುರ: ತಾಲೂಕಿನ ಗಡಿ ಗ್ರಾಮ ತಂಬಲಗೇರಿಯಲ್ಲಿ ಶುಕ್ರವಾರ ಬೆಳಗ್ಗೆ ಬಳ್ಳಿಗದ್ದೆ ಶ್ರೀ ಚೌಡಮ್ಮ ದೇವಿ ಮಹೋತ್ಸವ ನಡೆಯಲಿದೆ.
ಕೊಡಗು-ಸಕಲೇಶಪುರ ಸುತ್ತಮುತ್ತ ಅಪಾರ ಭಕ್ತರನ್ನು ಹೊಂದಿರುವ ಬಳ್ಳಿ ಗದ್ದೆ ಚೌಡಮ್ಮ ದೇವಿ ಅಪಾರ ಭಕ್ತ ಬೃಂದಾವನ ಹೊಂದಿದ್ದು ಗ್ರಾಮದ ಚೌಡಿವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಬೆಳಗ್ಗೆ ನಾಲ್ಕು ಗಂಟೆಗೆ ಬಂದು ಹರಕೆ ಮತ್ತು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಮಧ್ಯಾಹ್ನ 1.30ಕ್ಕೆ ನೆರೆದಿರುವ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ವರ್ಷಕ್ಕೊಮ್ಮೆ ನಡೆಯುವ ವಿಶೇಷ ಪೂಜೆಯಲ್ಲಿ ದೇವಿ ಚೌಡೇಶ್ವರಿ ಗೆ ಹರಕೆ ಮಾಡಿದರೆ ಭಕ್ತರ ಬೇಡಿಕೆಯನ್ನು ಈಡೇರಿಸುತ್ತಾಳೆ ಎಂಬುದು ಭಕ್ತಾದಿಗಳ ನಂಬಿಕೆ.
ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಹಾಗೂ ಕಾರ್ಯದರ್ಶಿ ಭರತ್ ಗೌಡ ಹಾಗೂ ಎಲ್ಲಾ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ