ಕ್ವಾಲಿಟಿ ಬಾರ್, ಕೃಷ್ಣ ಹೋಟೆಲ್ ಮೇಲೆ ಎಸ್ಐಟಿ ದಾಳಿ!

ಹೋಟೆಲ್, ಬಾರ್ ಗಳಲ್ಲಿ ಎಸ್ಐಟಿ ಅಧಿಕಾರಿಗಳಿಂದ ತಲಾಶ್!

ಹಾಸನ: ಸಂಸದ ಪ್ರಜ್ವಲ್‌ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತ ವಲಯದ ಇಬ್ಬರು ಉದ್ಯಮಿಗಳ ಹೋಟೆಲ್ ಹಾಗೂ ಬಾರ್ ಮೇಲೆ ದಾಳಿ ನಡೆಸಿದೆ

ಪೆನ್ ಡ್ರೈವ್ ಹಂಚಿಕೆ ಸಂಬಂಧ ಜೆಡಿಎಸ್ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ಪೆನ್ ಡ್ರೈವ್ ಹಂಚಿದ್ದಾರೆಂದು ಆರೋಪಿಸಿದ್ದ ಶರತ್ ಒಡೆತನದ ಬಿಎಂ ರಸ್ತೆಯಲ್ಲಿರುವ ಕ್ವಾಲಿಟಿ ಬಾರ್ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುಖಂಡ ಕಿರಣ್ ಒಡೆತನದ ಕೃಷ್ಣ ಹೋಟೆಲ್ ಮೇಲೆ ಎಸ್ಐಟಿ ದಾಳಿ ನಡೆದಿದೆ.

ಬಾರ್ ಹಾಗೂ ಹೋಟೆಲ್‌ನಲ್ಲಿರುವ ಕಂಪ್ಯೂಟರ್ ಗಳನ್ನು ಪರಿಶೀಲಿಸುತ್ತಿರುವ ಎಸ್‌ಐಟಿ ಟೀಂ ನಡೆ ಕುತೂಹಲ ಮೂಡಿಸಿದೆ. ಸೆನ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಉಳಿದವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ಶರತ್ ನ್ಯಾಯಾಲಯದ ಮೆಟ್ಟಿಲೇರಿರಲಿಲ್ಲ.