ಭವಾನಿ ರೇವಣ್ಣಗೆ ಎಸ್ಐಟಿಯಿಂದ ಮತ್ತೊಂದು ನೋಟಿಸ್: ನಾಳೆಯೇ ವಿಚಾರಣೆಗೆ ಖುದ್ದು ಹಾಜರಿರಲು ಸೂಚನೆ

ಹಾಸನ: ವಿಶೇಷ ತನಿಖಾ ತಂಡ ಭವಾನಿ ರೇವಣ್ಣಗೆ ಮತ್ತೊಂದು ನೋಟೀಸ್ ನೀಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿದೆ.

15-05-24 ರಂದು ನೀಡಿದ ನೋಟೀಸ್‌ಗೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದೀರಿ. ಆದರೆ ಈ ಹಿಂದೆ ನೀಡಿದ್ದ ನೋಟೀಸ್‌ಗೆ ನೀವು ಉತ್ತರಿಸಿಲ್ಲ. ಈ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡುವ ಅವಶ್ಯಕತೆ ಇದೆ.

ಆದ್ದರಿಂದ 01-06-24 ರಂದು ಖುದ್ದು ಹಾಜರಾಗುವಂತೆ ಎಸ್ಐಟಿ ಇನ್ಸ್‌ಪೆಕ್ಟರ್ ಹೇಮಂತ್ ಕುಮಾರ್ ನೋಟೀಸ್ ನೀಡಿದ್ದು, ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ಒಳೆಗೆ ವಿಚಾರಣೆಗೆ ಆಗಮಿಸುತ್ತೇವೆ. ಆ ಸಂದರ್ಭ ಖುದ್ದು ಮನೆಯಲ್ಲಿ ಹಾಜರಿರಬೇಕೆಂದು ಸೂಚಿಸಿದ್ದಾರೆ.

ಕೆ.ಆರ್‌.ನಗರ ತಾಲೂಕಿನ ಸಂತ್ರಸ್ತ ಮಹಿಳೆ ಕಿಡ್ನಾಪ್ ಕೇಸ್‌ನಲ್ಲಿ ಭವಾನಿಗೆ ಸಂಕಷ್ಟ ಎದುರಾಗಿದ್ದು ಇಂದು ನಿರೀಕ್ಷಣಾ ಜಾಮೀನು ಸಿಗದಿದ್ದರೆ ಅವರು ಬಂಧನ ಭೀತಿ ಎದುರಿಸುವಂತಾಗಿದೆ.