ಪ್ರಜ್ವಲ್ ರೇವಣ್ಣ ಪ್ರಕರಣ; ನಾಳೆ ಪೋಟೋ, ವಿಡಿಯೊ, ತಾಂತ್ರಿಕ ಸಾಕ್ಷ್ಯ ವೀಕ್ಷಣೆಗೆ ಅವಕಾಶ ನೀಡಿದ ನ್ಯಾಯಾಲಯ

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮೊಬೈಲ್‌ ಅನ್ನು ವಾಪಸ್ ಕೊಡುವಂತೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಕೋರ್ಟ್‌ನಲ್ಲಿಯೇ ವಿಡಿಯೋ ಮತ್ತು ಫೋಟೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಖುಲಾಸೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.

ಬೆಂಗಳೂರು:ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋ, ತಾಂತ್ರಿಕ ಸಾಕ್ಷ್ಯಗಳನ್ನು ನಾಳೆ ವೀಕ್ಷಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರಾದ ಪ್ರಜ್ವಲ್ ಅವರಿಗೆ ನ್ಯಾಯಾಲಯ, ಇಂದೇಪ್ರಕರಣದ ವಿಡಿಯೋ, ಫೋಟೋ, ತಾಂತ್ರಿಕ ಸಾಕ್ಷ್ಯವೀಕ್ಷಣೆಗೆ ಅವಕಾಶ ನೀಡುವುದಾಗಿ ಹೇಳಿತ್ತು.

ಆದರೆ ಪ್ರಜ್ವಲ್ ಪರ ವಕೀಲರ ಮನವಿ ಮೇರೆಗೆ ತಾಂತ್ರಿಕ ತಜ್ಞರ ಸಹಾಯದಿಂದ ಪೋಟೋ, ವಿಡಿಯೋಗಳನ್ನು ನಾಳೆ ವಿಕ್ಷೀಸಲು ಅವಕಾಶ ನೀಡಲಾಗಿದೆ.