ಗನ್ನಿಕಡದ ತೋಟದ ಮನೆ, ಹೊಳೆನರಸೀಪುರದ ಎಚ್.ಡಿ.ರೇವಣ್ಣ ಮನೆ ಹಾಗೂ ಸಂಸದರ ನಿವಾಸಕ್ಕೆ ಮತ್ತೊಮ್ಮೆ ಆಗಮಿಸಿದ ಎಸ್ಐಟಿ ಅಧಿಕಾರಿಗಳ ತಂಡ

ಎರಡೂ ನಿವಾಸಗಳಲ್ಲಿ ಅಧಿಕಾರಿಗಳಿಂದ ತಪಾಸಣೆ

ಹಾಸನ: ನಗರದ ಸಂಸದರ‌ ನಿವಾಸ, ಗನ್ನಿಕಡದ ತೋಟದ ಮನೆ ಹಾಗೂ ಹೊಳೆನರಸೀಪುರದ ಎಚ್.ಡಿ.ರೇವಣ್ಣ ‌ನಿವಾಸಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ಎಸ್ಐಟಿ ಟೀಂ ತನಿಖೆಗಾಗಿ ಇಂದು ಮತ್ತೊಮ್ಮೆ ಭೇಟಿ ನೀಡಿದೆ.

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿರುವ ಗನ್ನಿಕಡದ ತೋಟದ ಮನೆಗೂ ಅಧಿಕಾರಿಗಳ ತಂಡ ಆಗಮಿಸಿದೆ.

ಈ ಹಿಂದೆ ಕೂಡ ಸ್ಥಳ ಮಹಜರ್ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಇಂದು‌ ಎಸಿಪಿ ಸತ್ಯನಾರಾಯಣ ನೇತೃತ್ವದಲ್ಲಿ ಮೂರೂ ನಿವಾಸಗಳಿಗೂ ಮೂರು ಜೀಪ್ ಗಳಲ್ಲಿ ಆಗಮಿಸಿದ್ದಾರೆ.

ಎಚ್.ಡಿ.ರೇವಣ್ಣ ಮನೆ ಹಾಗೂ ಸಂಸದರ ನಿವಾಸದಲ್ಲಿ ಎಸ್ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.