ಹಾಸನ ಡಿಸಿ ಕಚೇರಿ ಎಸ್‌ಡಿಎ ನಿಗೂಢ ಆತ್ಮಹತ್ಯೆ

ಹಾಸನ: ಜಿಲ್ಲಾಧಿಕಾರಿ ಕಚೇರಿಯ ಎಸ್‌ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಚಿತ್ರಾ (೩೧) ಮೃತ ಎಸ್‌ಡಿಎ.
ನಗರದ ರಕ್ಷಣಾಪುರಂನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಚಿತ್ರಾ ಜಿಲ್ಲಾಧಿಕಾರಿ ಕಚೇರಿಯ ಗ್ರಾಮ ಒನ್ ಕೇಂದ್ರದಲ್ಲಿ ಎಸ್‌ಡಿಎ ಆಗಿ ಸುಚಿತ್ರಾ ಕೆಲಸ ಮಾಡುತ್ತಿದ್ದರು.

ಇವರ ಪತಿ ಕೃಷ್ಣಮೂರ್ತಿ, ವಿ.ಎ. ಆಗಿ ಕೆಲಸ ಮಾಡುತ್ತಿದ್ದರು.
ಈ ನಡುವೆ ಇತ್ತೀಚೆಗೆ ಅಪಘಾತದಲ್ಲಿ ಪತಿ ನಿಧನ ಹೊಂದಿದ ನಂತರ ಸುಚಿತ್ರಾಗೆ ಎಸ್‌ಡಿಎ ಹುದ್ದೆ ನೀಡಲಾಗಿತ್ತು. ಆದರೆ ಸುಚಿತ್ರಾ ನಿಗೂಢವಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.