ಮಾಸ್ಟರ್ಸ್ ಕಾಲೇಜು ಬಸ್ ಚಾಲಕನನ್ನು ಅಟ್ಟಾಡಿಸಿ ಥಳಿಸಿದ ಮೃತ ವಿದ್ಯಾರ್ಥಿ ಸಂಬಂಧಿಕರು; ಕಾಲೇಜು ಸುತ್ತ ಬಿಗುವಿನ ವಾತಾವರಣ

ಹಾಸನ:  ಮಾಸ್ಟರ್ಸ್ ಕಾಲೇಜು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ನೇಣುಬಿಗಿದ ಸ್ಥಿತಿಯಲ್ಲಿ ಶವಪತ್ತೆ ಪ್ರಕರಣದಲ್ಲಿ ಆಡಳಿತ ಮಂಡಳಿ ಪರವಾಗಿ ಮಾತನಾಡಲು ಬಂದ ಕಾಲೇಜು ಬಸ್ ಚಾಲಕನನ್ನು ಮೃತನ ಸಂಬಂಧಿಕರು ಅಟ್ಟಾಡಿಸಿ ಥಳಿಸಿದ್ದಾರೆ.

ಸದ್ಯ ಹಾಸ್ಟೆಲ್ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಮೃತನ ಸಂಬಂಧಿಕರ ಕೈಗೆ ಸಿಕ್ಕು ಹಿಗ್ಗಾಮುಗ್ಗಾ ಥಳಿತಕ್ಕೊಳಗಾಗುತ್ತಿದ್ದ ಚಾಲಕನನ್ನು ತಮ್ಮ‌ ಜೀಪಿಗೆ ಹತ್ತಿಸಿಕೊಂಡು ಪೊಲೀಸರು ಕಾಪಾಡಿದರು.

ಸಂಬಂಧಿಕರ ಆಕ್ರೋಶ, ರೋಧನ ಮುಗಿಲು ಮುಟ್ಟಿದ್ದು, ಪೊಲೀಸ್ ಜೀಪ್ ನಿಂದಲೂ ಚಾಲಕನನ್ನು ಹೊರಗೆಳೆದು ಹಲ್ಲೆ ನಡೆಸಲು ಯತ್ನಿಸಿದರು. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.