Hassan ಹಾಸನ, ಜೂನ್ 10, 2025: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಹಾಸನ ಜಿಲ್ಲೆಯಲ್ಲಿ ಜೂ. 12 ರಿಂದ 14ರವರೆಗೆ ಗುಡುಗು, ಸಿಡಿಲು ಮತ್ತು ತೀವ್ರ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದೆ.
ಸಾರ್ವಜನಿಕರಿಗೆ ಸೂಚನೆಗಳು:
– ಮಳೆ, ಗಾಳಿ, ಸಿಡಿಲಿನ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯಿರಿ.
– ಕೃಷಿಕರು, ಪ್ರವಾಸಿಗರು, ಮೀನುಗಾರರು ಕೃಷಿ ಚಟುವಟಿಕೆಗಳಿಂದ ದೂರವಿರಿ; ನದಿ, ಜಲಾಶಯಗಳಂತಹ ಪ್ರದೇಶಗಳಿಗೆ ಇಳಿಯದಿರಿ.
– ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು, ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಿ.
– ಹಳೆಯ ಅಥವಾ ದುರ್ಬಲ ಕಟ್ಟಡಗಳ ಬಳಿ ನಿಲ್ಲದಿರಿ; ಕಟ್ಟಡದ ಮೇಲಿರುವ ಅಪಾಯಕಾರಿ ಗೆಲ್ಲು/ಕೊಂಬೆಗಳನ್ನು ಮೊದಲೇ ಕತ್ತರಿಸಿ.
– ಭೂಕುಸಿತದ ಸಾಧ್ಯತೆ ಇರುವ ಪ್ರದೇಶದಲ್ಲಿ ವಾಸಿಸುವವರು ತಹಶೀಲ್ದಾರರ ಕಚೇರಿ ಅಥವಾ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ, ಹತ್ತಿರದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಿರಿ.
– ಭಾರೀ ಮಳೆಯಿಂದಾಗಿ ದುರ್ಬಲ ಕಟ್ಟಡದಲ್ಲಿ ವಾಸಿಸುವವರು ಮುಂಜಾಗ್ರತೆಯಾಗಿ ಕಾಳಜಿ ಕೇಂದ್ರಗಳಲ್ಲಿ ಉಳಿಯಿರಿ.
ಅಧಿಕಾರಿಗಳಿಗೆ ಸೂಚನೆ:
ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು.
ತುರ್ತು ಸಂಪರ್ಕ:
– 24×7 ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ: 08172-261111 / 1077
– ತಾಲೂಕು ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸಿ.
ಸಂಪರ್ಕ ವಿವರ:
– ದೂರವಾಣಿ: 08172-267345, 265028, 203345
– ಫ್ಯಾಕ್ಸ್: 08172-265418
– ಇ-ಮೇಲ್: deo.hassan@gmail.com
– ವೆಬ್‌ಸೈಟ್: hassan.nic.in
ಸಾರ್ವಜನಿಕರು ಮುಂಜಾಗ್ರತೆ ವಹಿಸಿ, ಸುರಕ್ಷಿತವಾಗಿರಿ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮನವಿ ಮಾಡಿದ್ದಾರೆ.