ಚನ್ನರಾಯಪಟ್ಟಣ:ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರದ ರಥಕ್ಕೆ ನುಗ್ಗೇಹಳ್ಳಿ ವೀರಶೈವ ಸಮಾಜ ಹಾಗೂ ಗ್ರಾಮದ ವತಿಯಿಂದ ಗುರುವಾರ ಅದ್ಧೂರಿಯಿಂದ ಸ್ವಾಗತಿಸಲಾಯಿತು.
ನುಗ್ಗೇಹಳ್ಳಿ ಪೊಲೀಸ್ ಠಾಣೆ ಮುಂಭಾಗ ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥಕ್ಕೆ ವೀರಶೈವ ಸಮಾಜದ ಪ್ರಮುಖರು ಹಾಗೂ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
ಹೋಬಳಿ ಅಧ್ಯಕ್ಷ ಎನ್.ಎಸ್.ಗಿರೀಶ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರದ ರಥ ಗ್ರಾಮಕ್ಕೆ ಆಗಮಿಸಿದ್ದು ಹೋಬಳಿ ವೀರಶೈವ ಸಮಾಜ ಹಾಗೂ ಗ್ರಾಮದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ ಹೋಬಳಿ ಕೇಂದ್ರಕ್ಕೆ ಬರಮಾಡಿಕೊಳ್ಳಲಾಗಿದೆ ಎಂದರು.
ಜನವರಿ 26 ರಿಂದ 31ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದ್ದು ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ದರ್ಶನ ಪಡೆಯುವಂತೆ ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಎನ್.ಆರ್.ಕೃಪಾ ಶಂಕರ್ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವಕ್ಕೆ ತನ್ನದೇ ಇತಿಹಾಸವಿದೆ. ಸುಮಾರು 6 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು ಪ್ರತಿದಿನ ವಿವಿಧ ಉತ್ಸವಗಳು ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸುತ್ತೂರು ಶ್ರೀ ಕ್ಷೇತ್ರ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥದ ಸಂಚಾಲಕ ಮಂಜುನಾಥ್, ಸಮಾಜದ ಹಿರಿಯರಾದ ಎನ್.ಟಿ.ಸಿದ್ದಪ್ಪ, ವೀರಶೈವ ಸೇವಾ ಸಮಿತಿಯ ಖಜಾಂಚಿ ಕುಮಾರಸ್ವಾಮಿ, ಪ್ರಮುಖರಾದ ಉಮಾಶಂಕರ್, ಎನ್.ಸಿ.ವಿಶ್ವನಾಥ್, ಜಯ ಕೀರ್ತಿ, ಬಿ.ಸಿ.ಚನ್ನೇಗೌಡ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಚಿರಂಜೀವಿ, ಆರ್.ರುದ್ರಸ್ವಾಮಿ, ಎನ್..ಸಿ.ಕುಮಾರಸ್ವಾಮಿ, ಹಿರಿಸಾವೆ ನಂದಕುಮಾರ್, ಮರಿಶೆಟ್ಟಿಹಳ್ಳಿ ಸತೀಶ್, ಎನ್.ಎನ್.ಮನು, ರೇಣುಕಾ ಸ್ವಾಮಿ, ತ್ರಿನೇಶ್, ಎನ್ಎನ್ ರುದ್ರಸ್ವಾಮಿ, ಹೋಟೆಲ್ ಮಂಜು, ಎನ್‌ಪಿ ಪ್ರದೀಪ್, ಎನ್‌ಪಿ ಆನಂದ್, ಗಣೇಶ್, ನಾಗರಾಜ್, ವಿಜಿ, ಹರೀಶ್, ಎನ್ಎನ್ ಅರುಣ್,ಅರ್ಚಕ ದಿನೇಶ್,ಮುಖಂಡರಾದ ಎನ್ ಎಸ್ ಲಕ್ಷ್ಮಣ್, ಎಚ್. ಜೆ. ಕಿರಣ್ , ತೋಟಿ ನಾಗರಾಜ್, ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.