ಹಾಸನ: ಮೂವರು ಬಾಲಕರು ನಾಪತ್ತೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಪ್ರಗತಿ ಸಾಧಿಸಿದ್ದು ಮಕ್ಕಳು ಮೈಸೂರಿನಲ್ಲಿ ಇರುವ ಮಾಹಿತಿ ಆಧರಿಸಿ ಅವರನ್ನು ಕರೆತರಲು ತಂಡವನ್ನು ಕಳುಹಿಸಲಾಗಿದೆ.
ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆಗೆ ಹೆದರಿದ ಶಂಕೆ:
ಪ್ರಾಥಮಿಕ ತನಿಖೆಯ ಪ್ರಕಾರ, ಈ ಮೂವರು ವಿದ್ಯಾರ್ಥಿಗಳು ಪೂರ್ವ ಸಿದ್ದತಾ ಪರೀಕ್ಷೆಗೆ ಹೆದರಿಕೊಂಡು ಮನೆ ಬಿಟ್ಟು ಹೋಗಿರುವುದು ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ಪರೀಕ್ಷೆಗಳಿಗೆ ಹಾಜರಾಗಿದ್ದ ಈ ವಿದ್ಯಾರ್ಥಿಗಳು, ನಿನ್ನೆ ನಡೆದ ಇಂಗ್ಲೀಷ್ ಪರೀಕ್ಷೆಗೆ ಹೆದರಿ ಶಾಲೆಗೆ ಹೋಗದೆ ಮೈಸೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರಿಂದ ಶೀಘ್ರ ಕಾರ್ಯಾಚರಣೆ:
ಪೊಲೀಸರು ಮಕ್ಕಳ ಪತ್ತೆಗಾಗಿ ತಕ್ಷಣ ಕಾರ್ಯಾಚರಣೆ ಕೈಗೊಂಡು ಮೈಸೂರಿನಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ನಿರೀಕ್ಷೆ ಮೂಡಿದೆ.