ಹಾಸನ ಲೋಕಸಭಾ ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ; ನಾನೂ ಪ್ರಬಲ ಟಿಕೆಟ್ ಆಕಾಂಕ್ಷಿ;ಹೆಚ್.ಪಿ.ಕಿರಣ್‌ಗೌಡ

ರಾಜಕೀಯಕ್ಕೆ ಬರುವ ಮುನ್ನ ಶಿಕ್ಷಣ, ಬಡಮಕ್ಕಳಿಗೆ ನೆರವು, ಅನಾಥಾಶ್ರಮಗಳಿಗೆ ದೇಣಿಕೆ ಸೇರಿದಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಈಗಲೂ ಅದನ್ನು ಮುಂದುವರಿಸುತ್ತಿದ್ದೇನೆ.

ಹಾಸನ: ಹಾಸನ ಲೋಕಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ. ಈ ಬಗ್ಗೆ ಸರ್ವೆ ನಡೆಯುತ್ತಿದ್ದು, ನಾನೂ ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ಕೆಸಿಪಿ ಗ್ರೂಪ್‌ನ ಸಿಇಒ ಹೆಚ್.ಪಿ.ಕಿರಣ್‌ಗೌಡ ತಿಳಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಒಲವು, ನಿಲುವು ಯಾರ ಪರ ಇದೆ, ಯಾರು ಗೆಲ್ಲುವ ಸಾಧ್ಯತೆ ಇದೆ ಎಂಬುದರ ಬಗ್ಗೆ ಸರ್ವೆ ನಡೆಯುತ್ತಿದೆ. ಅದು ಮುಗಿದ ನಂತರ ಟಿಕೆಟ್ ಯಾರಿಗೆ ಎಂಬುದು ಅಂತಿಮ ಆಗಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆಯಾದರೂ, ಇಂಥವರೇ ಅಭ್ಯರ್ಥಿ ಎಂಬುದು ಈವರೆಗೂ ಫೈನಲ್ ಆಗಿಲ್ಲ ಎಂದು ಹೇಳಿದರು.

ನಾನು ಎಲ್ಲಾ ತಾಲೂಕು, ಹೋಬಳಿ ಸೇರಿದಂತೆ ಸುತ್ತಾಡಿದ್ದೇನೆ. ಮುಖಂಡರು, ಕಾರ್ಯಕರ್ತರೊಂದಿಗೆ ಮಾತನಾಡಿದ್ದೇನೆ. ಎಲ್ಲೆಡೆ ನನ್ನ ಪರವಾದ ಒಲವಿದ್ದು, ನನಗೊಂದು ಅವಕಾಶ ನೀಡಿದರೆ ಗೆಲ್ಲುವ ವಿಶ್ವಾಸ ಇದೆ ಎಂಬುದು ಅನೇಕರ ಭಾವನೆಯಾಗಿದೆ ಎಂದರು.

ಯಾರು ಜನರ ಮಧ್ಯೆ ಇದ್ದಾರೆ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ಗೆಲುವಿನ ಶಕ್ತಿ ಯಾರಿಗಿದೆ ಎಂಬುದನ್ನು ಗುರುತಿಸಿ ನಮ್ಮ ಪಕ್ಷ
ಅವಕಾಶ ನೀಡಲಿದೆ.ನಮ್ಮ ಉದ್ದೇಶ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಎಂಬುದು ಎಂದು ತಿಳಿಸಿದರು.

ಪಕ್ಷ ಹೇಳಿದಂತೆ ಕೆಲಸ: ಒಂದು ವೇಳೆ ಹಾಸನ ಕ್ಷೇತ್ರ ಜೆಡಿಎಸ್‌ಗೆ ಸಿಕ್ಕಿ ಅವರ ಪಕ್ಷದಿಂದ ಪ್ರಜ್ವಲ್ ಸೇರಿ ಯಾರೇ ಅಭ್ಯರ್ಥಿಯಾದರೂ, ನಮ್ಮ ಪಕ್ಷ ಏನು ಸೂಚನೆ ಕೊಡುತ್ತದೆಯೋ ಅದನ್ನು ಒಬ್ಬ ಕಾರ್ಯಕರ್ತನಾಗಿ ನಿರ್ವಹಿಸುವೆ ಎಂದು ಪ್ರಶ್ನೆಗೆ ಉತ್ತರಿಸಿದರು. ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆ ಕೇಳಿದ ಪ್ರಶ್ನೆಗೆ ತಾತ ದೇವೇಗೌಡರು ಮಾಡಿರುವಷ್ಟು ಕೆಲಸ ಮಾಡಿಲ್ಲ ಎಂದು ಉತ್ತರಿಸಿದರು.

ನನ್ನದೇ ಕನಸಿದೆ: ನಾನು ನಾಲ್ಕೆöÊದು ವರ್ಷಗಳಿಂದ ಬಿಜೆಯಲ್ಲಿದ್ದೇನೆ. ರಾಜಕೀಯಕ್ಕೆ ಬರುವ ಮುನ್ನ ಶಿಕ್ಷಣ, ಬಡಮಕ್ಕಳಿಗೆ ನೆರವು, ಅನಾಥಾಶ್ರಮಗಳಿಗೆ ದೇಣಿಕೆ ಸೇರಿದಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಈಗಲೂ ಅದನ್ನು ಮುಂದುವರಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಹೊಸದಾಗಿ ಏನಾದ್ರೂ ಮಾಡಬೇಕು ಎಂಬ ಹಸಿವಿದೆ.

ಇದಕ್ಕೆ ಎಲ್ಲರ ಮಾರ್ಗದರ್ಶನ, ಪ್ರೀತಿ, ಸಹಕಾರ, ಬೆಂಬಲ ಇರಲಿ ಎಂದು ಮನವಿ ಮಾಡಿದರು.
ನಾನೊಬ್ಬ ಯಂಗ್ ಪೇರೆಂಟ್, ರಾಜಕೀಯ ಅನುಭವ ಇಲ್ಲದಿದ್ದರೂ, ಒಳ್ಳೆಯ ಉದ್ದೇಶ, ಕನಸು ಹೊಂದಿದ್ದೇನೆ. ಯುವಶಕ್ತಿಯನ್ನು ಓದಿನ ಜೊತೆಗೆ ಕ್ರೀಡೆಯಲ್ಲೂ ಉತ್ತೇಜಿಸುವ ಉದ್ದೇಶದಿಂದ ಕ್ರೀಡೆಗೆ ಹಲವು ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬ ಮಹದಾಸೆ ನನ್ನಲ್ಲಿದೆ ಎಂದರು. ಈ ಮೂಲಕ ಯೂತ್‌ಗೆ ಬೆಂಬಲವಾಗಿ ನಿಲ್ಲಬೇಕು. ಜೊತೆಗೆ ಸ್ವಯಂ ಉದ್ಯೋಗ ಮಾಡಲು ಬೇಕಾದ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಯುವಶಕ್ತಿ ಸ್ವತಂತ್ರವಾಗಿ ದುಡಿಯಲು ಬೇಕಾದ ಅವಕಾಶ ಕಲ್ಪಿಸುವುದು, ಆರ್ಥಿಕ ಅಭಿವೃದ್ಧಿ ಮಾಡುವುದು ನನ್ನ ಆಶಯವಾಗಿದೆ ಎಂದು ಹೇಳಿದರು. ನಾನು ನೂರರಷ್ಟು ಜನಸಂಪರ್ಕ ಮಾಡಿಲ್ಲ, ಮುಂದೆ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವೆ. ಆ ಇಚ್ಛಾಶಕ್ತಿ ಇದೆ ಎಂದ ಅವರು, ಜಿಲ್ಲೆಗೆ ಕ್ರೀಡಾಸೌಲಭ್ಯ ಒದಗಿಸಲು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧನಿದ್ದೇನೆ ಎಂದರು.

ನನ್ನ ರಾಜಕೀಯ ಮಾರ್ಗದರ್ಶಕರು ಹಾಗೂ ರಾಜಕೀಯ ಗುರು ಮಾಜಿ ಶಾಸಕರಾದ ಪ್ರೀತಂಗೌಡ ಅವರು, ಅವರ ಕಾರ್ಯಶೈಲಿ, ಯಾವುದೇ ಅಭಿವೃದ್ಧಿ ಕೆಲಸ ಮಾಡುವ
ರೀತಿ ನನಗಿಷ್ಟ. ಅದೇ ಕಾರಣಕ್ಕೆ ಮತ್ತು ಬಿಜೆಪಿ ಐಡಿಯಾಲಜಿ ಒಪ್ಪಿ ಬಿಜೆಪಿ ಸೇರಿ ಕೆಲಸ ಮಾಡುತ್ತಿದ್ದೇನೆ.  -ಹೆಚ್.ಪಿ.ಕಿರಣ್‌ಗೌಡ