ಸಕಲೇಶಪುರ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣದ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಹಾಗೂ ಇಂಥ ಪ್ರಕರಣಗಳು ಮರುಕಳಿಸಿದಂತೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಹಾಸನ ಮುಸ್ಲಿಂ ಒಕ್ಕೂಟದ ಸದಸ್ಯರು ಉಪವಿಭಾಗಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮಿನಿ ವಿದಾನಸೌಧ ಮುಂಭಾಗದಲ್ಲಿ ಉಪವಿಭಾಗದಿಕಾರಿ ಡಾ. ಎಂ ಕೆ. ಶ್ರುತಿ ಅವರಿಗೆ ಮನವಿ ಸಲ್ಲಿಸಿದ ಮುಸ್ಲಿಂ ಮುಖಂಡರು, ಈ ಕೃತ್ಯ ಮಾತ್ರವಲ್ಲ ಮಹಿಳೆಯರ ಮೇಲೆ ನಡೆಯುವ ಎಲ್ಲಾ ಅಪರಾಧಗಳನ್ನು ಖಂಡಿಸುತ್ತೇವೆ ಎಂದರು.
ನೇಹಾ ಕೊಂದ ಆರೋಪಿ ಮನವಕುಲಕ್ಕೆ ಮಾರಕ ಅರೋಪಿ ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತಹ ಕಠಿಣ ಕಾಯಿದೆಗಳ ಅಡಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷೆ ಧರ್ಮಕ್ಕಲ್ಲ, ಕ್ರೂರಿಗಳ ಕ್ರೂರತನಕ್ಕಾಗಲಿ, ಜಯ ಧರ್ಮಕ್ಕಲ್ಲ, ಹೆಣ್ತನದ ಉಳಿವಿಗಾಗಲಿ, ಮಾನವೀಯತೆ ಉಳಿಯಲಿ. ಇಂತಹ ಘಟನೆಗಳನ್ನು ಮುಸ್ಲಿಂ ಒಕ್ಕೂಟ ಖಂಡಿಸುತ್ತದೆ.
ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆಯದಂತೆ ನೋಡಿಕೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಉಗ್ರ ಶಿಕ್ಷೆಗೆ ಒಳಪಡಿಸುವುದೇ ಇರುವ ದೊಡ್ಡ ಮಾರ್ಗವಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಯ್ಯದ್ ಮುಪೀಜ್, ಸಲೀಂ ಕೊಲ್ಲಹಳ್ಳಿ, ಬಿಲ್ ಕಸ್ ರಾಣಿ, ಹಸೀನಾ ಹುರುಡಿ, ಜಾಬೀರ್, ಸಾಯಿರಾ ಭಾನು, ಝಾಕೀರ್, ಮುನ್ನಾ, ಮಹಮ್ಮದ್, ಕಾಸೀಂ ಕಾಕಾ, ಹನೀಫ್, ಅಝೀಂ, ಇದ್ರೀಸ್ ಮುಂತಾದವರು ಇದ್ದರು.