ಲಂಚಬಾಕ ಡಿಡಿಪಿಐ ಪಾಂಡು ಹಾಗೂ ಕಚೇರಿ ಅಧೀಕ್ಷಕ ವೇಣು ಲೋಕಾಯುಕ್ತ ಬಲೆಗೆ; ಶಿಕ್ಷಕಿ ವರ್ಗಾವಣೆಗೆ ಲಂಚ ವಸೂಲಿ ಮಾಡುವಾಗ ಸಿಕ್ಕಿಬಿದ್ದ ಭ್ರಷ್ಟರು

ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಶಿಕ್ಷಕಿ ವರ್ಗಾವಣೆಗೆ ಲಂಚ ಸ್ವೀಕರಿಸುತ್ತಿದ್ದ ಡಿಡಿಪಿಐ ಎಸ್.ಕೆ. ಪಾಂಡು ಹಾಗೂ ಕಚೇರಿ ಅಧೀಕ್ಷಕ ಎ.ಎಸ್. ವೇಣುಗೋಪಾಲ್‌ರಾವ್ 40 ಸಾವಿರ ರೂ. ಲಂಚದ ಹಣದ ಸಮೇತ ಬಲೆಗೆ ಬಿದ್ದಿದ್ದಾರೆ.

ಡಿಡಿಪಿಐ ಪಾಂಡು ಅವರು ಎ.ಎಸ್. ವೇಣುಗೋಪಾಲ್‌ರಾವ್ ಮೂಲಕ ಶಿಕ್ಷಕಿಯ ವರ್ಗಾವಣೆಗೆ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಶಿಕ್ಷಕಿಯ ಪತಿ ಅಭಿಜಿತ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದರು.

ದೂರು ಆಧರಿಸಿ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು ಮತ್ತು ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿ, 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಪಾಂಡು ಹಾಗೂ ವೇಣುಗೋಪಾಲ್‌ರಾವ್ ಅವರನ್ನು ಹಣದ ಸಮೇತ ವಶಕ್ಕೆ ಪಡೆದಿದೆ.