ಹಾಸನ: ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದ್ದು ಮುದ್ರಣ ಮಾಧ್ಯಮ ವಿಭಾಗದಿಂದ ಕಾಂತರಾಜ್ ಹೊನ್ನೇಕೋಡಿ, ನಂದನ್ ಪುಟ್ಟಣ್ಣ,ಮೋಹನ್ ಕಣತೂರು, ದೃಶ್ಯ ಮಾಧ್ಯಮ ವಿಭಾಗದಲ್ಲಿ ಪ್ರಕಾಶ್ ಬೆಳವಾಡಿ, ಎಂ.ಎಸ್.ಸ್ವಾಗತ್, ಯೋಗೇಶ್ ಹಾಗೂ ಮಹೇಶ್ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಮುದ್ರಣ ಮಾಧ್ಯಮ ವಿಭಾಗ:
ಅತ್ಯುತ್ತಮ ಮಾನವೀಯ ವರದಿ: (ಪೌರ ಕಾರ್ಮಿಕರಿಗೆ ಗಗನಕುಸುಮವಾದ ಸ್ವಂತ ಸೂರು- ಜೋಪಡಿ ವಾಸವೇ ಕಾಯಂ) ವಾರ್ಷಿಕ ಪ್ರಶಸ್ತಿಗೆ ವಿಜಯವಾಣಿಯ ಸಕಲೇಶಪುರ ತಾಲೂಕು ವರದಿಗಾರ ಕಾಂತರಾಜು ಹೊನ್ನೆಕೋಡಿ ಆಯ್ಕೆಯಾಗಿದ್ದಾರೆ.
ವಿಶೇಷ ವರದಿ: (ಬಿಸಿಲಿನ ತಾಪಕ್ಕೆ ತತ್ತರಿಸಿದ ತೆಂಗಿನ ಮರಗಳು) ವಾರ್ಷಿಕ ಪ್ರಶಸ್ತಿಗೆ ಕನ್ನಡಪ್ರಭ, ಚನ್ನರಾಯಪಟ್ಟಣ ತಾಲೂಕು ವರದಿಗಾರ ನಂದನ್ ಪುಟ್ಟಣ್ಣ.
ಸಾಮಾಜಿಕ ಕಳಕಳಿಯ ವರದಿ: (1108 ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲ) ವಾರ್ಷಿಕ ಪ್ರಶಸ್ತಿಗೆ ವಿಜಯವಾಣಿ ಜಿಲ್ಲಾ ವರದಿಗಾರ ಮೋಹನ್ ಕಣತೂರು.
ಪರಿಸರ ಮತ್ತು ವನ್ಯಜೀವಿ ವರದಿ: (ಮಲೆನಾಡಿಗರ ನಿದ್ದೆ ಕೆಡಿಸಿದ ಜೀರುಂಡೆ ಸದ್ದು) ವಾರ್ಷಿಕ ಪ್ರಶಸ್ತಿಗೆ ಜನಮಿತ್ರ ಪ್ರಾದೇಶಿಕ ಪತ್ರಿಕೆಯ ಸಕಲೇಶಪುರ ತಾಲೂಕು ವರದಿಗಾರ ಯೋಗೇಶ್ ಆಯ್ಕೆಯಾಗಿದ್ದಾರೆ.
ದೃಶ್ಯಮಾಧ್ಯಮವಿಭಾಗ:
ಮಾನವೀಯ ವರದಿ: (ನಮಗೆ ಬಾಲ ಮಂದಿರ ಬೇಕು ಉಳಿಸಿಕೊಡಿ) ವಾರ್ಷಿಕ ಪ್ರಶಸ್ತಿಗೆ ಟಿವಿ-5 ಜಿಲ್ಲಾ ವರದಿಗಾರ ತ್ಯಾಗರಾಜ್(ಪ್ರಕಾಶ್)
ಸಾಮಾಜಿಕ ಕಳಕಳಿಯ ವರದಿ:(ಸಕಲೇಶಪುರದಲ್ಲಿ ಮಾಡದ ತಪ್ಪಿಗೆ ವೃದ್ಧ ಕುಟುಂಬಕ್ಕೆ ಬಹಿಷ್ಕಾರ) ವಾರ್ಷಿಕ ಪ್ರಶಸ್ತಿಗೆ ವಿವಿಸಿ ನ್ಯೂಸ್ ಜಿಲ್ಲಾ ವರದಿಗಾರ ಸ್ವಾಗತ್.ಎಂ.ಎಸ್,
ಸಂಚಲನ ಹಾಗೂ ಫಲಶೃತಿ ವರದಿ: (ಕುಡಿಯುವ ನೀರಿಗೆ ಚನ್ನಕೇಶವ ದೇಗುಲಕ್ಕೆ ಬರುವ ಪ್ರವಾಸಿಗರ ಪರದಾಟ-ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮರುಚಾಲನೆ) ವಾರ್ಷಿಕ ಪ್ರಶಸ್ತಿಗೆ ಅಮೋಘ್‌ನ್ಯೂಸ್, ಹಾಸನ ಸಂಸ್ಥೆ ಭಾಜನವಾಗಿದೆ.
ಅತ್ಯುತ್ತಮ ವಿಡಿಯೋಗ್ರಫಿ ವಾರ್ಷಿಕ ಪ್ರಶಸ್ತಿ: (ಅರ್ಜುನ ಆನೆ ಡಿಸ್‌ಮಿಸ್) ಟಿವಿ-9 ಜಿಲ್ಲಾ ಕ್ಯಾಮರಾಮೆನ್ ಮಹೇಶ್ ಅವರು ಆಯ್ಕೆಯಾಗಿದ್ದಾರೆ,
ಪ್ರಶಸ್ತಿಗೆ ಭಾಜನರಾದವರಿಗೆ ದಿನಾಂಕ ಜು.14 ರಂದು ಹಾಸನದ ಗಾಂಧಿ ಭವನದಲ್ಲಿ ನಡೆಯುವ ಮಾಧ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಅತಿಥಿಗಳ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರನ್ನು ಜಿಲ್ಲಾ ಪತ್ರಕರ್ತರ ಸಂಘ ಅಭಿನಂದಿಸಿದೆ.