ಜೆಡಿಎಸ್ ಫ್ಲೆಕ್ಸ್‌ನಲ್ಲಿ ಪ್ರೀತಂಗೌಡ ಟೀಂ‌ ಪ್ರತ್ಯಕ್ಷ; ಸ್ನೇಹಹಸ್ತ ಚಾಚಿದ ದೋಸ್ತಿ

ಹಾಸನ: ನಗರದ ಜ್ಞಾನಾಕ್ಷಿ ಕಲ್ಯಾಣಮಂಟಪದಲ್ಲಿ ನಡೆಯುತ್ತಿರುವ ಜೆಡಿಎಸ್‌ನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ಕಾರ್ಯಕರ್ತರ ಸಭೆಯ ಫ್ಲೆಕ್ಸ್ ನಲ್ಲಿ ಬಿಜೆಪಿ ನಾಯಕರ ಭಾವಚಿತ್ರ ಮುದ್ರಿಸುವ ಮೂಲಕ ದೋಸ್ತಿಗಳ ಮನವೊಲಿಕೆಗೆ ಜೆಡಿಎಸ್ ಸ್ನೇಹಹಸ್ತ ಚಾಚಿದೆ.

ಜೆಡಿಎಸ್ ನಾಯಕರ ಜತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಶಾಸಕರಾದ ಬೆಳ್ಳಿಪ್ರಕಾಶ್, ಸಿಮೆಂಟ್ ಮಂಜು, ಮಾಜಿಶಾಸಕರಾದ ಎ.ಟಿ.ರಾಮಸ್ವಾಮಿ, ಎಚ್.ಎಂ.ವಿಶ್ವನಾಥ್, ಮಾಜಿ ಎಂಎಲ್‌ಸಿ ಬಿ.ಆರ್.ಗುರುದೇವ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಫೋಟೋಗಳನ್ನು ಫ್ಲೆಕ್ಸ್ ನಲ್ಲಿ ಮುದ್ರಿಸಲಾಗಿದೆ.

ಪ್ರಜ್ವಲ್‌ರೇವಣ್ಣ‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಶಾಸಕ ಪ್ರೀತಂಗೌಡ ಅಂಡ್ ಟೀಂ ವಿರೋಧ ತಣ್ಣಗಾಗಿಸಲು ಮೊದಲ ಬಾರಿಗೆ ಬಿಜೆಪಿ ನಾಯಕರ ಪೋಟೋ ಹಾಕಿರುವ ಜೆಡಿಎಸ್ ನಡೆ ಅಚ್ಚರಿ ಮೂಡಿಸಿದೆ.

ಸಭಾಂಗಣದ ಹೊರಗೆ ಹಾಗೂ ಒಳಗೆ ಹಾಕಿರುವ ಫ್ಲೆಕ್ಸ್‌ಗಳಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ, ಮಾಜಿಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಫೋಟೋಗಳೂ ಇವೆ.