ಹಾಸನ: ಜಿಲ್ಲೆಯಲ್ಲೂ ವಕ್ಫ್ ಆಸ್ತಿ ಆವಾಂತರ ಮುಂದುವರಿದಿದ್ದು, ಅರಲಗೂಡಿನ ಕೆರೆ ಜಾಗದ ವಿವಾದ ನ್ಹಾಯಾಲಯದಲ್ಲಿರುವಾಗಲೇ ಪಹಣಿಯಲ್ಲಿ ಮಾಲೀಕತ್ವ ವಕ್ಫ್ ಬೋರ್ಡ್ ಗೆ ವರ್ಗಾವಣೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಅರಕಲಗೂಡು ಪಟ್ಟಣದಲ್ಲಿರುವ ಗೌರಿಕೆರೆ/ಗೌರಿ ಕಟ್ಟೆ ಜಾಗದ ಮಾಲೀಕತ್ವದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಹೀಗಿರುವಾಗಲೇ ಪಹಣಿಯಲ್ಲಿ ಸಕಲೇಶಪುರ ಉಪವಿಭಾಗಾಧಿಕಾರಿ ಆದೇಶ ಆಧರಿಸಿ ಎಂದು ನಮೂದಿಸಿ 4 ಎಕರೆ 10 ಗುಂಟೆ ಕೆರೆಯ ಜಾಗದ ಮಾಲೀಕತ್ವ ಕಾಲಂನಲ್ಲಿ ವಕ್ಫ್ ಬೋರ್ಡ್ ಪಟ್ಟಾ, ಮಸೀದಿ ಪದಾಧಿಕಾರಿ ಹೆಸರು ನಮೂದಿಸಲಾಗಿದೆ.
ಈಗ ನೀರಿನ ಮೂಲವಿಲ್ಲದೆ ಬರಿದಾಗಿರುವ ಕೆರೆ ಜಾಗ ಕೋಟ್ಯಂತರ ರೂ. ಬೆಲೆಬಾಳುತ್ತಿದೆ. ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ