ದೇವರಾಜೇಗೌಡ ಕಾರು ಸೀಜ್ ಮಾಡಿದ ಪೊಲೀಸರು: ಥಂಬ್ಸ್ ಅಪ್ ಮಾಡಿ ಸ್ಟೇಷನ್ ಒಳಗೆ ಹೋದ ಬಿಜೆಪಿ ಮುಖಂಡ

ಹಾಸನ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಮುಖಂಡ‌ ಜಿ.ದೇವರಾಜೇಗೌಡ ಅವರ ಇನ್ನೋವಾ ಕ್ರಿಸ್ಟಾ ಕಾರನ್ನು ಹೊಳೆನರಸೀಪುರ ನಗರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.

ಕಾರಿನಲ್ಲೂ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಸಂತ್ರಸ್ತೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ದೇವರಾಜೇಗೌಡ ಅವರನ್ನು ಕರೆದೊಯ್ದು ಕಾರನ್ನು ತಪಾಸಣೆ ನಡೆಸಿದ ಪೊಲೀಸರು ಈ ಮೊದಲೇ ಕಾರಿನಲ್ಲಿದ್ದ ಮೊಬೈಲ್ ವಶಕ್ಕೆ ಪಡೆದಿದ್ದರು.

ವೈದ್ಯಕೀಯ ಪರೀಕ್ಷೆಗೆ ದೇವರಾಜೇಗೌಡ ಅವರನ್ನು ಕರೆದೊಯ್ಯುಲಿರುವ ಪೊಲೀಸರು ಪರೀಕ್ಷೆ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಕಾರು ತಪಾಸಣೆ ನಡೆಸಿ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿಗೆ ಹೋಗುವಾಗ ಮಾಧ್ಯಮಗಳ ಕಡೆಗೆ ತಿರುಗಿಸ ದೇವರಾಜೇಗೌಡ ಹೆಬ್ಬೆರಳು ಮೇಲೆತ್ತಿ ತೋರಿಸಿ ಒಳ ಹೋದರು.