ಅಪ್ಪನನ್ನೇ ಹೊಡೆದು ಕೊಂದ ಪಾಪಿ ಪುತ್ರ; ಕುಡಿತದ ಮತ್ತಿನ ಹೊಡೆದಾಟ ಪ್ರಾಣ ತೆಗೆಯಿತು

ಕುಸಿದು ಬಿದ್ದ ಅಪ್ಪನನ್ನು ನಿರ್ಲಕ್ಷಿಸಿದ್ದ ಪುತ್ರ ಸಂದೀಪ; ಬೆಳಗ್ಗೆಯೇ ಕುಸಿದು ಬಿದ್ದು ಪ್ರಾಣಬಿಟ್ಟ ರವಿ

ಹಾಸನ: ತಂದೆ-ಮಗನ ನಡುವಿನ ಜಗಳ ಅಪ್ಪನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ತಾಲ್ಲೂಕಿನ, ಪೂಮಗಾಮೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ರವಿ (45) ಮಗನಿಂದಲೇ ಕೊಲೆಯಾದವ ವ್ಯಕ್ತಿ, ತಂದೆ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ ಆರೋಪಿ ಪುತ್ರ ಸಂದೀಪ (24) ಪರಾರಿಯಾಗಿದ್ದಾರೆ.

ಕುಡಿತದ ದಾಸರಾಗಿದ್ದ ಅಪ್ಪ-ಮಗ ಇಬ್ಬರೂ ಬುಧವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದರು. ಆ ಮತ್ತಿನಲ್ಲಿ ತಂದೆ- ಮಗನ ನಡುವೆ ಶುರುವಾದ ಜಗಳ, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದರು.

ಆ ವೇಳೆ ಸಂದೀಪ ಅಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಆಗ ಮನೆಯಲ್ಲಿಯೇ ಕುಸಿದು ಬಿದ್ದಿದ್ದ ರವಿ ಬೆಳಗ್ಗೆ ಎದ್ದು ನೀರು ಸೇವಿಸಿದ ತಕ್ಷಣವೇ ಅಸುನೀಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುದ್ದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.